ನಾಪೋಕ್ಲುವಿನಲ್ಲಿ ಪಿಕಪ್-ಸ್ಕೂಟಿ ಡಿಕ್ಕಿ| ಸ್ಕೂಟಿ ಸವಾರ ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಸ್ಕೂಟಿ ಹಾಗೂ ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಚಲಾಯಿಸುತ್ತಿದ್ದ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಮಾ. 21ರಂದು ನಾಪೋಕ್ಲು ಮುತ್ತಪ್ಪ ದೇವಾಲಯದ ಸಮೀಪ ನಡೆದಿದೆ.

Ad Widget ... ..

ಸ್ಥಳೀಯ ಅಯ್ಯಂಗೇರಿ ನಿವಾಸಿ ಅಬ್ದುಲ್ ಕರೀಂ ಅವರ ಮಗ ಹಕ್ಕಿಮ್ (24) ಗಾಯಗೊಂಡಿದ್ದು ಹಕ್ಕಿಮನನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಪೋಕ್ಲುವಿನ ಹಳೆ ತಾಲೂಕಿನ ಕಡೆ ತೆರಳುತ್ತಿದ್ದ ಸ್ಕೂಟಿ ಎದುರುಗಡೆಯಿಂದ ಬರುತ್ತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget

Leave a Comment

Your email address will not be published. Required fields are marked *