ಸಮಗ್ರ ನ್ಯೂಸ್ : ವ್ಯಕ್ತಿಗಳಿಬ್ಬರು ಗಾಂಜಾ ಸೇವಿಸಿ ಅನುಚಿತವಾಗಿ ವರ್ತನೆ ತೋರಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ ದಾಳಿ ನಡೆಸಿ ಪುತ್ತೂರು ನಗರ ಪೊಲೀಸರು ಮೂವರನ್ನು ದಸ್ತಗಿರಿ ಮಾಡಿದ ಘಟನೆ ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿರುವ, ಟೌನ್‌ಹಾಲ್ ಬಳಿ ಸಾರ್ವಜನಿಕ ಪ್ರದೇಶದಲ್ಲಿ ನಡೆದಿದೆ.
ಆರೋಪಿಗಳನ್ನು ಬಪ್ಪಳಿಗೆ ಮನೆ, ಪುತ್ತೂರು ಕಸಬಾ ಗ್ರಾಮದ ನಿವಾಸಿ ಬಿ . ಉಮ್ಮರ್ ಫಾರೂಕ್ (36) ಹಾಗೂ ಮುಕ್ಕಚೇರಿ, ಉಳ್ಳಾಲ, ಮಂಗಳೂರು ತಾಲೂಕು ನಿವಾಸಿ ಕೆ. ಮೊಹಿದ್ದಿನ್ (43) ಎಂದು ಗುರುತಿಸಲಾಗಿದೆ.
ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿರುವ, ಟೌನ್‌ಹಾಲ್ ಬಳಿ ಸಾರ್ವಜನಿಕ ಪ್ರದೇಶದಲ್ಲಿ, ಇಬ್ಬರು ವ್ಯಕ್ತಿ ಅನುಚಿತವಾಗಿ ವರ್ತಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಸತೀಶ್ ಜಿ.ಜೆ ರವರು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದರು. ಈ ವೇಳೆ ಪರಾರಿಯಾಗಲು ಯತ್ನಿಸಿದ ಇಬ್ಬರನ್ನೂ ತಡೆದು ವಿಚಾರಿಸಲಾಗಿ, ಬಪ್ಪಳಿಗೆ ಮನೆ, ಪುತ್ತೂರು ಕಸಬಾ ಗ್ರಾಮದ ನಿವಾಸಿ ಬಿ . ಉಮ್ಮರ್ ಫಾರೂಕ್ (36) ಹಾಗೂ ಮುಕ್ಕಚೇರಿ, ಉಳ್ಳಾಲ, ಮಂಗಳೂರು ತಾಲೂಕು ನಿವಾಸಿ ಕೆ. ಮೊಹಿದ್ದಿನ್ (43) ಎಂಬುದಾಗಿ ತಿಳಿದು ಬಂದಿರುತ್ತದೆ.
ವ್ಯಕ್ತಿಗಳು ನಶೆಯಲ್ಲಿದಂತೆ ಕಂಡು ಬಂದ ಹಿನ್ನೆಲೆಯಲ್ಲಿ ಅವರುಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಆರೋಪಿಗಳು ನಿಷೇಧಿತ ಗಾಂಜಾ ಅಮಲು ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.