ಸಮಗ್ರ ನ್ಯೂಸ್: ಆನ್ಲೈನ್ ಆಹಾರ ಪೂರೈಕಾ ಸಂಸ್ಥೆ ಜೊಮಾಟೋ ಹಸಿರು ಸಮವಸ್ತ್ರ ಧರಿಸಿ, ಹಸಿರು ಬಾಕ್ಸ್ಗಳಲ್ಲಿ ಡೆಲಿವರಿ ಮಾಡಬೇಕು ಎಂದು ಹೊರಡಿಸಿದ್ದ ತನ್ನ ನಿರ್ಧಾರವನ್ನು, ಸಾರ್ವಜನಿಕರ ವ್ಯಾಪಕ ಟೀಕೆಗಳ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ತನ್ನ ನಿರ್ಧಾರವನ್ನು ಹಿಂಪಡೆದಿದೆ.
ಈ ಕುರಿತು ಜೊಮಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್, ಎಂದು ಅವರು ಸ್ಪಷ್ಟಪಡಿಸಿದ್ದು, ಆಹಾರ ವಿತರಣೆಯಲ್ಲಿ ಪ್ರತ್ಯೇಕತೆ ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಎಲ್ಲಾ ರೀತಿಯ ಆಹಾರ ವಿತರಕರು ಕೆಂಪು ಬಣ್ಣದ ಸಮವಸ್ತ್ರವನ್ನೇ ಧರಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.