Ad Widget .

ಬೆಂಗಳೂರು: ಮೆಟ್ರೋ ಟ್ರಾಕ್ ಗೆ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ಉತ್ತರ ಭಾರತದಿಂದ ಕಾನೂನು ಅದ್ಯಯನಕ್ಕೆ ಬಂದ ಯುವಕ ಒಬ್ಬ ಬೆಂಗಳೂರಿನಲ್ಲಿರುವ ಅತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿರುವ ಮೆಟ್ರೋ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ್ದು ಈ ವೇಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.

Ad Widget . Ad Widget .

ಗುರುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಟ್ರೈನ್ ಬರುವ ಸಂದರ್ಭದಲ್ಲಿ ಯುವಕ ತಕ್ಷಣ ಟ್ರ್ಯಾಕ್ ಗೆ ಜಿಗಿದಿದ್ದಾನೆ. ಈ ವೇಳೆ ಆತನಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

Ad Widget . Ad Widget .

ಬೆಂಗಳೂರಿನ ನೇರಳೆ ಮಾರ್ಗದಲ್ಲಿ ಇರುವ ಈ ಒಂದು ನಿಲ್ದಾಣದಲ್ಲಿ ವೈಟ್‌ಫೀಲ್ಡ್ ಹಾಗೂ ಚಲ್ಲಗಟ್ಟ ಮಾರ್ಗ ಮಧ್ಯೆ ಹತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿ ಟ್ರ್ಯಾಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಮೆಟ್ರೋ ಸಿಬ್ಬಂದಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *