ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸೊಸೈಟಿಯಲ್ಲಿ ಕಳ್ಳತನ

ಸಮಗ್ರ ನ್ಯೂಸ್‌ : ಪೆರಿಯಡ್ಕದ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ನುಗ್ಗಿದ ಕಳ್ಳನೋರ್ವ ಹಣಕ್ಕಾಗಿ ತಡಕಾಡಿದ ಘಟನೆ ಮಾ. 20ರಂದು ಬೆಳಕಿಗೆ ಬಂದಿದೆ.

Ad Widget ... ..

ಮಾ. 19ರ ಸಂಜೆ ಸಂಘದ ಕಚೇರಿಯನ್ನು ಬಂದ್‌ ಮಾಡಿ ಸಿಬಂದಿ ತೆರಳಿದ್ದು, ಬೆಳಗ್ಗೆ ಬರುವಾಗ ಕಚೇರಿಯ ಷಟರ್‌ನ ಬೀಗ ಮುರಿದು ಕಳ್ಳನೋರ್ವ ಒಳಗೆ ನುಗ್ಗಿದ್ದಾನೆ. . ಈತ ಹಣಕ್ಕಾಗಿ ಮೇಜಿನ ಡ್ರಾವರ್‌ಗಳನ್ನು ಮುರಿದು ಸುಮಾರು ಒಂದೂವರೆ ಸಾವಿರ ರೂ. ಎಗರಿಸಿ, ಪರಾರಿಯಾಗಿದ್ದಾನೆ.

Ad Widget

ಸ್ಥಳೀಯ ಮನೆಯೊಂದರಿಂದ ಪಿಕ್ಕಾಸನ್ನು ತಂದು ಷಟರ್‌ನ ಬೀಗ ಮುರಿಯಲು ಬಳಸಿದ್ದ ಎಂದು ತಿಳಿದು ಬಂದಿದೆ. ಗುರುತು ಸಿಗದಂತೆ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ ಈತನ ಚಲನವಲನಗಳು ಸಂಘದ ಸಿಸಿ ಕೆಮರಾದಲ್ಲಿ ಪತ್ತೆಯಾಗಿವೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Comment

Your email address will not be published. Required fields are marked *