Ad Widget .

ಮಂಗಳೂರು: 3 ಲಕ್ಷ ಮೌಲ್ಯದ 1.65 ಕೆಜಿ ಡ್ರಗ್ ವಶ

ಸಮಗ್ರ ನ್ಯೂಸ್:‌ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ರವರೆಗೆ 12,300 ರೂಪಾಯಿ ಮೌಲ್ಯದ 21.34 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ. 3,13,500 ರೂ.ಗಳ ಮೌಲ್ಯದ 1.65 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

Ad Widget . Ad Widget .

2024ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಕ್ರಮಗಳನ್ನು ತಡೆಹಿಡಿಯಲು ಜಿಲ್ಲೆಯಲ್ಲಿ ಒಟ್ಟು 8 ಖರ್ಚು ವೆಚ್ಚ ಪರೀವೀಕ್ಷಕರರನ್ನು, 72 ಪ್ಲೈಯಿಂಗ್ ಸ್ವ್ಯಾಡ್ (ಎಫ್.ಎಸ್.ಟಿ), 69 ಎಸ್.ಎಸ್.ಟಿ ತಂಡಗಳು ಮತ್ತು 8 ಅಬಕಾರಿ ತಂಡಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ.

Ad Widget . Ad Widget .

ನೀತಿ ಸಂಹಿತೆ ಜಾರಿಯಾದ ದಿನದಿಂದ ಮಾರ್ಚ್ 20 ವರೆಗೆ ದೂರವಾಣಿ ಮೂಲಕ (1950) 75 ಸಾರ್ವಜನಿಕರಿಂದ ಮಾಹಿತಿ ಕೋರಿಕೆಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ. ಸಿ-ವಿಸಿಲ್ ಆಪ್ ಮೂಲಕ ಇಲ್ಲಿಯವರೆಗೆ 11 ದೂರುಗಳು ಸ್ವೀಕೃತಗೊಂಡಿದ್ದು ಎಲ್ಲಾ ದೂರುಗಳನ್ನು ವಿಲೇವಾರಿ ಮಾಡಲಾಗಿರುತ್ತದೆ.

ಎನ್.ಜಿ.ಆರ್.ಎಸ್ ಪೋರ್ಟಲ್ (ರಾಷ್ಟ್ರೀಯ ಕುಂದುಕೊರತೆಗಳ ಪರಿಹಾರ ವ್ಯವಸ್ಥೆ )ಮೂಲಕ ಜಿಲ್ಲೆಯಲ್ಲಿ ಒಟ್ಟು 27 ದೂರುಗಳು ಸ್ವೀಕೃತಗೊಂಡಿದ್ದು, 22 ದೂರುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು/ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *