Ad Widget .

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆ ಎಂದು ಗಂಡನನ್ನೆ ಕೊಂದ ಹೆಂಡತಿ

ಸಮಗ್ರ ನ್ಯೂಸ್: ಮದುವೆ ಆಗಿದ್ದರೂ ಮತ್ತೊಬ್ಬನ ಜೊತೆ ಸಂಬಂದ ಬೆಳೆಸಿದ ಮಹಿಳೆ ಗಂಡನನ್ನೇ ಕೊಂದು ಹಾಕಿದ್ದ ಘಟನೆ ನಡೆದಿದೆ. ಬಿಜೆಪಿಯ ಮಾಜಿ ತಾಲೂಕು ಪಂಚಾಯತಿ ಸದಸ್ಯ ರಾಜು ನಾಯ್ಕ್ ಪತ್ನಿಯಿಂದಲೇ ಕೊಲೆಯಾಗಿದ್ದಾನೆ. ಈ ಘಟನೆ ರಾಯಚೂರಿನ ಸಿಂಗನೋಡಿ ತಾಂಡಾದಲ್ಲಿ ನಡೆದಿದೆ.

Ad Widget . Ad Widget .

ಗ್ರಾಮಕ್ಕೆ ದೇವಸ್ಥಾನದ ಗೋಪುರ ಕಟ್ಟಲು ಬಂದಿದ್ದ ಮಹಾರಾಷ್ಟ್ರ ಮೂಲದ ವ್ಯಕ್ತಿ ಜತೆಗೆ ಸ್ನೇಹಾ ಸಲುಗೆಯನ್ನು ಬೆಳೆಸಿದ್ದಳು. ಆತನನ್ನು ಮೋಹಿಸಿದ ಸ್ನೇಹಾ ಆತನೊಟ್ಟಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಕದ್ದು ಮುಚ್ಚಿ ಆತನೊಟ್ಟಿಗೆ ಸೇರುತ್ತಿದ್ದಳು. ಆದರೆ ಇದು ಪತಿ ರಾಜುಗೆ ತಿಳಿದುಹೋಯಿತು. ಈ ವಿಷಯ ಊರವರಿಗೆ ತಿಳಿದರೆ ಮಾನ ಮಾರ್ಯಾದೆ ಹೋಗುತ್ತೆ ಎಂದು ರಾಜು, ತನ್ನ ಪತ್ನಿ ಸ್ನೇಹಾಗೆ ಬುದ್ಧಿವಾದ ಹೇಳಿದ್ದ. ಆದರೂ ಸ್ನೇಹಾ ತನ್ನ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಕಳೆದ 2 ವರ್ಷಗಳಿಂದ ಜಗಳ ನಡೆಯುತ್ತಿತ್ತು.

Ad Widget . Ad Widget .

ಇತ್ತೀಚೆಗೆ ದಂಪತಿ ಮಧ್ಯೆ ಇದೇ ವಿಷಯಕ್ಕೆ ಜಗಳ ನಡೆದಿತ್ತು. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಕ್ಕೆ ಸ್ನೇಹಾ ಆತನನ್ನು ಮುಗಿಸಿಬಿಡುವ ಪ್ಲ್ಯಾನ್‌ ಮಾಡಿದ್ದಳು. ಪತಿಗಿದ್ದ ಕುಡಿತವನ್ನೇ ಬಂಡವಾಳ ಮಾಡಿಕೊಂಡ ಸ್ನೇಹ, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದಳು. ಅದನ್ನೂ ಕುಡಿಯುತ್ತಿದ್ದಂತೆ ರಾಜು ನಿದ್ರೆಗೆ ಜಾರಿದಾಗ ಕತ್ತು ಹಿಸುಕಿ‌ ಕೊಲೆ ಮಾಡಿದ್ದಾಳೆ.

ಈ ವಿಚಾರವಾಗಿ ಪೊಲೀಸರು ತನಿಖೆ ನಡೆಸಿ ಸ್ನೇಹಳನ್ನು ವಶವಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *