ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಸ್ಥಾನದಿಂದ ಹಿಂದೆ ಸರಿದ ಎಂಎಸ್ ಧೋನಿ

ಸಮಗ್ರ ನ್ಯೂಸ್: ಚೆನ್ನೈ ಸೂಪರ್ ಕಿಂಗ್ಸ್‍ನ ನಾಯಕ ಸ್ಥಾನದಿಂದ ಅನುಭವಿ ಆಟಗಾರ ಎಂಎಸ್ ಧೋನಿ ಗುಡ್ ಬೈ ಹೇಳಿದ್ದು, ಅವರ ಬದಲಿಗೆ ತಂಡದ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ತಂಡದ ನಾಯಕತ್ವವನ್ನು ಹಸ್ತಾಂತರಿಸಲಾಗಿದೆ.

Ad Widget ... ..

2024 ರ ಟಾಟಾ ಐಪಿಎಲ್ ಆರಂಭಕ್ಕೂ ಮುನ್ನ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‍ಗೆ ಹಸ್ತಾಂತರಿಸಿದ್ದಾರೆ. ರುತುರಾಜ್ 2019 ರಿಂದ ಚೆನ್ನೈ ಸೂಪರ್ ಕಿಂಗ್ಸ್‍ನ ಅವಿಭಾಜ್ಯ ಅಂಗವಾಗಿದ್ದಾರೆ ಮತ್ತು ಈ ಅವಧಿಯಲ್ಲಿ ಐಪಿಎಲ್‍ನಲ್ಲಿ 52 ಪಂದ್ಯಗಳನ್ನು ಆಡಿದ್ದಾರೆ. ಮುಂಬರುವ ಋತುವಿನಲ್ಲಿ ಇವರ ನಾಯಕತ್ವದಲ್ಲಿ ಆಡುವುದನ್ನು ತಂಡ ಎದುರು ನೋಡುತ್ತಿದೆ’ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Ad Widget

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವದಿಂದ ಎಂಎಸ್ ಧೋನಿ ಕೆಳಗಿಳಿಯುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ ತಂಡದ ನಾಯಕತ್ವದಿಂದ ಕೆಳಗಿಳಿದು ಈ ಸ್ಥಾನವನ್ನು ರವೀಂದ್ರ ಜಡೇಜಾಗೆ ನೀಡಿದ್ದರು.

Leave a Comment

Your email address will not be published. Required fields are marked *