Ad Widget .

ಬೆಳ್ತಂಗಡಿ :ವೀಸಾ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ಪೋಲ್ಯಾಂಡ್ ದೇಶದಲ್ಲಿ ಕೆಲಸಕ್ಕೆ ಹೋಗಲು ವೀಸಾ ನೀಡುವುದಾಗಿ ವ್ಯಕ್ತಿಗೆ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಹಣ ಪಡೆದು ವೀಸಾ ನೀಡದೆ, ಪಡೆದ ಹಣವನ್ನು ಹಿಂತಿರುಗಿಸದೇ ವಂಚಿಸಿದ ಆರೋಪಿಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

ಬೆಳ್ತಂಗಡಿ ತಾಲೂಕು, ಅರಸಿನಮಕ್ಕಿ ನಿವಾಸಿ ರೆಜಿ ಕೆ ಎ ಎಂಬವರ ಮಗ ಆಲ್ವಿನ್ ಕೆ.ಆರ್ ಎಂಬವರೇ ಲಕ್ಷಾಂತರ ರೂಪಾಯಿ ಕಳೆದುಕೊಂಡು ವಂಚನೆಗೊಳಗಾದ ವ್ಯಕ್ತಿ. ಆರೋಪಿಯನ್ನು ಮನೋಜ್ ಎಂದು ಗುರುತಿಸಲಾಗಿದೆ.

Ad Widget . Ad Widget .

ಆಲ್ವಿನ್ ಕೆ ಎ ಅವರಿಗೆ ಮನೋಜ್ ಅವರು ಪೋಲ್ಯಾಂಡ್ ದೇಶದಲ್ಲಿ ಕೆಲಸಕ್ಕೆ ತೆರಳಲು ವೀಸಾ ನೀಡುವುದಾಗಿ ನಂಬಿಸಿ 2023 ರ ಮೇ 22 ರಿಂದ ಮಂಗಳವಾರದವರೆಗೆ ಮಾರ್ಚ್‌ 19 2024ರ ನಡುವಿನ ಅವಧಿಯಲ್ಲಿ ವಿವಿಧ ಕಾರಣ ನೀಡಿ ಹಂತ ಹಂತವಾಗಿ ಒಟ್ಟು 2.50 ಲಕ್ಷ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾನೆ. ಇದುವರೆಗೂ ವೀಸಾವನ್ನೂ ನೀಡದೆ, ನೀಡಿದ ಹಣವನ್ನೂ ವಾಪಾಸು ನೀಡದೆ ವಂಚಿಸಿರುವುದಾಗಿ ಆಲ್ವಿನ್ ಅವರು ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *