ಸಮಗ್ರ ನ್ಯೂಸ್: ನಟ ರಮೇಶ್ ಅರವಿಂದ್ ಸೇರಿದಂತೆ 8 ಮಂದಿಯನ್ನು ಮೂರು ಜಿಲ್ಲೆಗಳ ಜಿಲ್ಲಾ ಚುನಾವಣಾ ಐಕಾನ್ ಗಳಾಗಿ ರಾಜ್ಯ ಚುನಾವಣಾ ಆಯೋಗ ನೇಮಕ ಮಾಡಿ ಆದೇಶಿಸಲಾಗಿದೆ. ಮೈಸೂರು, ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಗಳಿಗೆ ಜಿಲ್ಲಾ ಐಕಾನ್ ಗಳನ್ನು ನೇಮಕ ಮಾಡುತ್ತಿರೋದಾಗಿ ಹೆಚ್ಚುವರಿ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಾಡೆಲ್ ಕುಮಾರಿ ತನಿಷ್ಕಾ ಮೂರ್ತಿ, ಅಂತಾರಾಷ್ಟ್ರೀಯ ವೈಲ್ಡ್ ಲೈಫ್ ಫೆÇೀಟೋಗ್ರಾಫರ್ ಕೆ ಸೇನಾನಿ ಹಾಗೂ ಬಿಎಸ್ ಕೃಪಾಕರ್ ಅವರನ್ನು ಮೈಸೂರು ಜಿಲ್ಲೆಯ ಜಿಲ್ಲಾ ಐಕಾನ್ ಗಳಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ನಟ ರಮೇಶ್ ಅರವಿಂದ್, ನಿವೃತ್ತ ಬ್ಯಾಡ್ಮಿಂಟನ್ ಕ್ರೀಡಾಪಟು ಅನುಪ್ ಶ್ರೀಧರ್ ನೇಮಕ ಮಾಡಲಾಗಿದೆ.
ಸಾಮಾಜಿಕ ಕಾರ್ಯಕರ್ತೆ ಹಾಗೂ ಅಂಗವಿಕಲೆ ಐಕಾನ್ ಆಗಿ ಲಕ್ಷ್ಮೀದೇವಿ.ಎನ್, ಜಾನಪದ ನೃತ್ಯಪಟು ಹೆಚ್ ಕೆ ಪರಮಂಚಪ್ಪ ಹಾಗೂ ಹಾಡುಗಾರ್ತಿ ಕುಮಾರಿ ಸಾಕ್ಷಿ ಹಿರೇಮರ್ ಅವರನ್ನು ವಿಜಯಪುರ ಜಿಲ್ಲೆಗೆ ಜಿಲ್ಲಾ ಐಕಾನ್ ಗಳನ್ನಾಗಿ ನೇಮಿಸಲಾಗಿದೆ.