Ad Widget .

ರಾಮನಗರದಲ್ಲಿ ಅಕ್ರಮವಾಗಿ ಸೀರೆ ಹಂಚಿಕೆ ಆರೋಪ| JDS- ಕಾಂಗ್ರೆಸ್ ಮಧ್ಯೆ ವಾಗ್ವಾದ

ಸಮಗ್ರ ನ್ಯೂಸ್: ಇತ್ತೀಚೆಗೆ ಎರಡು ದಿನಗಳಿಂದ ಕುಕ್ಕರ್ ಪಾಲಿಟಿಕ್ಸ್ ವಿಚಾರಗಳು ಕೇಳಿ ಬಂದಿತ್ತು. ಆದರೆ ಈಗ ಚುನಾವಣೆ ಘೋಷಣೆ ಆಗಿದ್ದೇ ಆಗಿದ್ದು, ರಾಜ್ಯದಲ್ಲಿ ಅಕ್ರಮ ಹಣ ಸಾಗಾಟ ಹೆಚ್ಚಾಗಿದೆ. ಅಕ್ರಮ ಹಣ ಸಾಗಾಟ ಪತ್ತೆಗೆ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನೂ ನಡೆಸುತ್ತಿದ್ದಾರೆ. ಹಲವೆಡೆ, ಕಂತೆ ಕಂತೆ ನಗದು ಪತ್ತೆಯಾಗಿದ್ದರೆ, ಇತ್ತ ರಾಮನಗರದಲ್ಲಿ ಗರಿ ಗರಿ ನೋಟಿನ ಜೊತೆ ರಾಶಿರಾಶಿ ಸೀರೆಗಳು ಸಿಕ್ಕಿವೆ.

Ad Widget . Ad Widget .

ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿವೆ. ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ. ಇನ್ನು ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿದ್ದ ಆರೋಪ ಕೇಳಿ ಬಂದಿದೆ. ಜೆಡಿಎಸ್​ ಕಾರ್ಯಕರ್ಯರು ದಾಳಿ ಮಾಡಿದ್ದು, ಕಾಂಗ್ರೆಸ್​ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ದಿನಕರ್ ಶೆಟ್ಟಿ ಭೇಟಿ, ಪರಿಶೀಲನೆ ನಡೆಸಿದ್ದಾರೆ.

Ad Widget . Ad Widget .

ಎನ್​ಎಂ ಗ್ರಾನೈಟ್​ ಕಂಪನಿ ಹೆಸರಿನಲ್ಲಿ ಗುಜರಾತ್​​ನಿಂದ ಸೀರೆ ತರಿಸಲಾಗಿದೆ. ರಾಜಕೀಯ ಪಕ್ಷ ಅಥವಾ ನಾಯಕರ ಪೋಸ್ಟರ್,‌ ಭಾವಚಿತ್ರ ಆ ಸೀರೆ ಮೇಲೆ ಇರಲಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ

Leave a Comment

Your email address will not be published. Required fields are marked *