ಸಮಗ್ರ ನ್ಯೂಸ್: ಮಂಗಳೂರು ಚಾಲಿ ಅಡಿಕೆ ಧಾರಣೆ ಹಾಗೂ ಕೊಕ್ಕೊ ಧಾರಣೆ ಏರಿಕೆಯತ್ತ ಮುಖಮಾಡಿದ್ದು, ಕರಾವಳಿಯ ವಾಣಿಜ್ಯ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ.
ಕ್ಯಾಂಪ್ಕೋ, ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಸ್ಥಿರವಾಗಿದ್ದರೆ, ಸಿಂಗಲ್ ಚೋಲ್, ಡಬ್ಬಲ್ ಚೋಲ್ ಧಾರಣೆ ಹೆಚ್ಚಳವಾಗಿದೆ. ಕಳೆದ ಒಂದು ತಿಂಗಳಲ್ಲಿ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 5 ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20 ರೂ., ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 8 ರಿಂದ 10 ರೂ., ಸಿಂಗಲ್ ಚೋಲ್ ಕೆ.ಜಿ.ಗೆ 20ರಿಂದ 25 ರೂ., ಡಬ್ಬಲ್ ಚೋಲ್ ಕೆ.ಜಿ.ಗೆ 20ರಿಂದ 23 ರೂ.ನಷ್ಟು ಏರಿಕೆ ಕಂಡಿದೆ.
ಅಡಿಕೆ ಧಾರಣೆ ಜೊತೆಗೆ ಕೊಕ್ಕೊ ಧಾರಣೆ ಕೂಡ ಏರಿಕೆ ಕಂಡಿದೆ. ನಾಲ್ಕು ದಿನಗಳ ಹಿಂದೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 170 ರೂ. ದರದಲ್ಲಿ ಮಾರಾಟವಾಗಿದೆ. ಒಣ ಕೊಕ್ಕೊ ಕೆ.ಜಿ.ಗೆ 500-575 ರೂ. ವರೆಗೆ ಖರೀದಿಯಾಗಿದೆ.