Ad Widget .

ನವೋದ್ಯಮದಲ್ಲಿ ಭಾರತಕ್ಕೆ ಮೂರನೇ ಸ್ಥಾನ/ ದೇಶದಲ್ಲಿ 1.25 ಲಕ್ಷ ಸ್ಟಾರ್ಟ್ ಅಪ್

ಸಮಗ್ರ ನ್ಯೂಸ್: ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಹೊಂದಿರುವ ದೇಶಗಳ ಪೈಕಿ ಭಾರತಾ ಮೂರನೇ ಸ್ಥಾನ ಪಡೆದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯ ಭಾರತ ಮಂಟಪಂನಲ್ಲಿ ನಡೆದ ‘ಸ್ಟಾರ್ಟ್ ಅಪ್ ಮಹಾಕುಂಭ’ದ ಸಮಾರೋಪ ಕಾರ್ಯಕ್ರಮದಲ್ಲಿ ಹೇಳಿದರು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

“ದೇಶದಲ್ಲಿ 2014ರ ವೇಳೆ ಕೇವಲ 100 ನವೋದ್ಯಮಗಳಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 1.25 ಲಕ್ಷಕ್ಕೆ ಮುಟ್ಟಿದೆ. ಈ ಪೈಕಿ ಶೇ 45ರಷ್ಟು ನವೋದ್ಯಮಗಳನ್ನು ಮಹಿಳೆಯರು ಮುನ್ನಡೆಸುತ್ತಿದ್ದಾರೆ. 12 ಲಕ್ಷ ಯುವಜನರು ಇವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಬಿಲಿಯನ್ ಅಮೆರಿಕನ್ ಡಾಲರ್‍ಗಿಂತ (ಅಂದಾಜು ?8,300 ಕೋಟಿ) ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ 110 ನವೋದ್ಯಮ ಕಂಪನಿಗಳಿವೆ. ನವೋದ್ಯಮಗಳು 12 ಸಾವಿರಕ್ಕೂ ಹೆಚ್ಚು ಪೇಟೆಂಟ್‍ಗಳಿಗೆ ಅರ್ಜಿ ಸಲ್ಲಿಸಿವೆ” ಎಂದು ತಿಳಿಸಿದರು.

Ad Widget . Ad Widget . Ad Widget .

“ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಮುನ್ನಡೆಸುವ ಶಕ್ತಿ ಭಾರತಕ್ಕಿದೆ. ಹಾಗಾಗಿ, ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕ್ಕುನತ್ತ ನವೋದ್ಯಮ ಹಾಗೂ ನವೋದ್ಯಮಿಗಳು ಕೆಲಸ ನಿರ್ವಹಿಸಬೇಕು. ಕೇಂದ್ರ ಸರ್ಕಾರವು ಕೃತಕ ಬುದ್ಧಿಮತ್ತೆ, ಸೆಮಿಕಂಡಕ್ಟರ್ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್‍ಗೆ ಚಾಲನೆ ನೀಡಿದೆ. ಇದರಿಂದ ಬಂಡವಾಳ ಹೂಡಲು ಜಾಗತಿಕ ಹೂಡಿಕೆದಾರರಿಗೆ ನೆರವಾಗಲಿದೆ. ಜೊತೆಗೆ, ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ” ಎಂದು ಹೇಳಿದರು.

“ನಾವಿಂದು ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದೇವೆ. ಭಾರತವು ಈ ತಂತ್ರಜ್ಞಾನದಲ್ಲಿ ಮುಂಚೂಣಿ ಸ್ಥಾನಕ್ಕೇರಲಿದೆ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬಾರದು” ಎಂದು ತಿಳಿಸಿದರು.

Leave a Comment

Your email address will not be published. Required fields are marked *