Ad Widget .

ಮಂಗಳೂರಿನಲ್ಲಿ ಮತ್ತೆ ದೈವಾರಾಧನೆ V/S ಮನೋರಂಜನೆ ವಿರುದ್ಧ ಆಕ್ರೋಶ

ಸಮಗ್ರ ನ್ಯೂಸ್‌ : ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಬಳಕೆ ವಿರುದ್ಧ ಎದಿದ್ದ ಆಕ್ರೋಶ ಇದೀಗ ಆಕ್ರೋಶ ತೀವ್ರಗೊಂಡ ಬೆನ್ನಲ್ಲೇ ಕಲಾವಿದರ ಶಕ್ತಿ ಪ್ರದರ್ಶನಗೊಂಡಿದೆ. ದಿನ ದಿನಕ್ಕೆ ಸಿನಿಮಾ, ನಾಟಕಗಳಲ್ಲಿ ದೈವರಾಧನೆಯ ದುರ್ಬಳಕೆ ಆರೋಪ ಹಲವು ಬಾರಿ ಸಿನಿಮಾ ಹಾಗು ರಂಗಭೂಮಿ ಕಲಾವಿದರ ವಿರುದ್ಧ ಆಕ್ರೋಶ ದೈವಾರಾಧಕರು ವ್ಯಕ್ತಪಡಿಸಿದ್ದರು.

Ad Widget . Ad Widget .

ಈ ಹೊತ್ತಲ್ಲೇ ಕರಾವಳಿಯ ಸಿನಿಮಾ ಹಾಗು ನಾಟಕ ಕಲಾವಿದರಿಂದ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾಲ್ನಡಿಗೆಯ ಜಾಥದ ಮೂಲಕ ದ.ಕ ಜಿಲ್ಲಾಧಿಕಾರಿಗೆ ರಂಗಕರ್ಮಿಗಳು ಮನವಿ ಸಲ್ಲಿಸಿದ್ದಾರೆ. ದೈವಾರಾಧನೆಯ ದುರ್ಬಳಕೆ ಎಂಬ ಕಾರಣವೊಡ್ಡಿ ಕಲಾವಿದರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಕರಾವಳಿಯ ಯಾವುದೇ ಮನೋರಂಜನಾ ಕಲೆಗಳಲ್ಲಿ ದೈವಾರಾಧನೆಯ ಅಪಹಾಸ್ಯ ಮಾಡಲಾಗುತ್ತಿಲ್ಲ. ಬದಲಾಗಿ ಅದರ ಮಹತ್ವವನ್ನ ತಿಳಿ ಹೇಳುವ ಕೆಲಸವಾಗುತ್ತಿದೆ ಆದರೆ ಇದೆ ಕಾರಣವಿಟ್ಟು ಕಲಾವಿದರ ಮೇಲೆ ಸವಾರಿ ಮಾಡಲಾಗುತ್ತಿದೆ.

Ad Widget . Ad Widget .

ನಾಟಕ, ಸಿನೆಮಾ ಸಂದರ್ಭ ಕೇವಲ ಶೀರ್ಷಿಕೆ ನೋಡಿ ಸಮಸ್ಯೆ ನಿರ್ಮಿಸುತ್ತಿದ್ದಾರೆ ಕೆಲವೊಂದಿಷ್ಟು ಸ್ಥಾಪಿತ ಹಿತಾಸಕ್ತಿಗಳು ತಮ್ಮ ಬೆಳೆ ಬೆಯ್ಯಿಸಿಕೊಳ್ಳುತ್ತಿದ್ದಾರೆ. ರಂಗಭೂಮಿ, ಸಿನಿಮಾಗಳನ್ನೇ ನಂಬಿರುವ ಕರಾವಳಿಯ 1700 ಕ್ಕೂ ಅಧಿಕ ಕಲಾವಿದರಿಗೆ ರಕ್ಷಣೆ ನೀಡಬೇಕು ಸಿನಿಮಾ ನಾಟಕ ಪ್ರದರ್ಶನಕ್ಕೆ ತೊಡಕಾಗದಂತೆ ಸಹಕರಿಸಬೇಕು ಎಂದು ಕಲಾವಿದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ.

Leave a Comment

Your email address will not be published. Required fields are marked *