Ad Widget .

ದ.ಕ ದಿಂದ ಡಿ.ವಿ ಎಸ್ ಸ್ಪರ್ಧೆಗೆ‌ ಭಾರೀ ವಿರೋಧ| ಡಿವಿ ಹಠಾವೋ ಎನ್ನಲು ಕಾರಣ ಏನ್ ಗೊತ್ತಾ?

ಸಮಗ್ರ ನ್ಯೂಸ್: ಕಾಂಗ್ರೇಸ್ ಪಕ್ಷ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿವಿ ಸದಾನಂದ ಗೌಡ ಅವರಿಗೆ ಟಿಕೇಟ್ ನೀಡುವುದಾದರೆ ಅದು ಜಿಲ್ಲೆಗೆ ಮಾಡಿರುವ ದೊಡ್ಡ ದ್ರೋಹ ಎಂದು ನೇತ್ರಾವತಿ ಹೋರಾಟ ಸಮಿತಿ ಆರೋಪಿಸಿದೆ.

Ad Widget . Ad Widget .

ನೇತ್ರಾವತಿ ಹೋರಾಟ ಸಮಿತಿಯ ಸಂಚಾಲಕ ದಿನಕರ್ ಶೆಟ್ಟಿ ಮಾಧ್ಯಮಗಳ ಜೊತೆ ಮಾತನಾಡಿ, ಯಾವುದೇ ಕಾರಣಕ್ಕೂ ಕಾಂಗ್ರೇಸ್ ಡಿವಿ ಸದಾನಂದ ಗೌಡ ಅವರಿಗೆ ದಕ್ಷಿಣ ಕನ್ನಡದಲ್ಲಿ ಟಿಕೆಟ್ ನೀಡಬಾರದು, ಜಿಲ್ಲೆಯ ನೀರಿನ ಸಮಸ್ಯೆಗೆ ಈ ವ್ಯಕ್ತಿಯೇ ಕಾರಣ, ಕಾಂಗ್ರೆಸ್ ನಿಂದ ಲೋಕಸಭೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಸೀಟ್ ಸಿಕ್ಕಿ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿದಲ್ಲಿ, ನೇತ್ರಾವತಿ ತಿರುವು ಹೋರಾಟ ಸಮಿತಿ ಡಿ.ವಿ ವಿರುದ್ಧ, ಡಿ. ವಿ. ಸದಾನಂದ ಗೌಡ ಹಠವೋ, ನೇತ್ರಾವತಿ ಬಚಾವೋ ಎಂದು ಡಿ. ವಿ ವಿರುದ್ಧ ಆಂದೋಲನ ಮಾಡಲಿದ್ದೇವೆ ಎಂದು ನೇತ್ರಾವತಿ ಉಳಿಸಿ ಹೋರಾಟ ಸಮಿತಿಯ ಸಂಚಾಲಕ ದಿನಕರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

Ad Widget . Ad Widget .

ಡಿ. ವಿ. ದಕ್ಷಿಣ ಕನ್ನಡ ಜನರಿಗೆ ಅನ್ಯಾಯ ಮಾಡಿದ್ದು, ಜಿಲ್ಲೆಯ ಜನರಿಗೆ ನೀರು ಇಲ್ಲದಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವಿ ಸದಾನಂದ ಗೌಡ ಈ ಜಿಲ್ಲೆಯಲ್ಲಿ ಹುಟ್ಟಿ ಈ ಜಿಲ್ಲೆಗೆ ದ್ರೋಹ ಮಾಡಿದ್ದಾರೆ. ನೇತ್ರಾವತಿ ನದಿ ತಿರುವು ಯೋಜನೆಯಿಂದಾಗಿ ಅರಣ್ಯ ನಾಶ ಮಾಡಿ, ಮಳೆ ಇಲ್ಲದ ಹಾಗೆ ಮಾಡಿದ್ದಾರೆ. ಆ ಕಾರಣಕ್ಕೆ ಕಾಂಗ್ರೇಸ್ ಯಾವುದೇ ಕಾರಣಕ್ಕೂ ಡಿವಿ ಅವರಿಗೆ ಟಿಕೆಟ್ ನೀಡಬಾರದು, ಒಂದು ವೇಳೆ ನೀಡಿದರೆ ಇದರ ಪರಿಣಾಮ 5 ಲಕ್ಷಕ್ಕೂ ಅಧಿಕ ಮತಗಳಿಂದ ಅವರನ್ನು ಸೋಲಿಸುತ್ತೇವೆ ಎಂದು ಎಚ್ಚರಿಸಿದರು.

Leave a Comment

Your email address will not be published. Required fields are marked *