ಮಡಿಕೇರಿ: ಲೋಕಾಯುಕ್ತರು ದಾಳಿ ವೇಳೆ ಎಸ್ಕೇಪ್ ಆದ ಸಬ್ ರಿಜಿಸ್ಟ್ರಾರ್ |ಬ್ರೋಕರ್ ಹರಿದರ್ ಅಂದರ್

ಸಮಗ್ರ ನ್ಯೂಸ್: ಮಡಿಕೇರಿಯ ನೋಂದಾವಣೆ ಅಧಿಕಾರಿ ಕಚೇರಿಗೆ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ ಸಬ್ ರಿಜಿಸ್ಟರ್ ಸೌಮ್ಯ ಲತಾ ಹಾಗೂ ಬ್ರೋಕರ್ ಹರಿದರ್ ಅಧಿಕಾರಿಗಳ ಬಲೆಗೆ ಸಿಲುಕಿಕೊಂಡಿರುವ ಘಟನೆ ಮಾ.20 ರಂದು ನಡೆದಿದೆ.

Ad Widget ... ..

ಮಡಿಕೇರಿ ತಾಲೂಕು ಕೋರಂಗಾಲದ ನಂಗಾರು ಕುಮಾರ್ ಎಂಬುವರಿಗೆ ಎರಡು ತಿಂಗಳಿನಿಂದ ಪೌತಿ ಖಾತೆ ವರ್ಗಾವಣೆಗೆ ಸತಾಯಿಸುತ್ತಿದ್ದು, ಸಬ್ ರಿಜಿಸ್ಟರ್ ಸೌಮ್ಯ ಲತಾ ನಂತರ ರಿಜಿಸ್ಟ್ರೇಷನ್ ಗೆ 50,000 ಬೇಡಿಕೆ ಇಟ್ಟಿದ್ದರು.

Ad Widget

ಇಂದು ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ ಸೌಮ್ಯ ಲತಾ ಎಸ್ಕೇಪ್ ಆಗಿದ್ದರೆ, ಆಕೆಯ ಏಜೆಂಟ್ ಬ್ರೋಕರ್ ಹರಿದರ್ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಎಸ್. ಪಿ ಸುಜಿತ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಲೋಕೇಶ್, ಹಾಗೂ ರೂಪಶ್ರೀ ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *