ಸಮಗ್ರ ನ್ಯೂಸ್: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾರಿಯುದ್ದಕ್ಕೂ ಪ್ರತಿ ಹೆಜ್ಜೆಗೂ ಪೆÇಲೀಸ್ ಕಾವಲು ಹಾಕಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಸ್‍ಗಳಲ್ಲಿ ಲಗೇಜ್ ಗಳನ್ನು ಸಾಗಿಸುವಾಗ ಪ್ರಯಾಣಿಕರಿಗೆ ಕೆಲವು ನಿಬರ್ಂಧಗಳನ್ನು ವಿಧಿಸಲಾಗಿದ್ದು, ಇನ್ನು ಮುಂದೆ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಲಗೇಜ್‍ನಲ್ಲಿ ಕೆಲವು ವಸ್ತುಗಳನ್ನು ಸಾಗಿಸಲು ಅನುಮತಿಸಲಾಗುವುದಿಲ್ಲ.
ಈಗಾಗಲೇ ನಾಲ್ಕು ನಿಗಮಗಳಿಗೆ ಹೊಸ ನಿಯಮಗಳನ್ನು ಪರಿಚಯಿಸಲಾಗಿದ್ದು ಚುನಾವಣಾ ಸಂಬಂಧಿತ ದಾಖಲಾತಿ ಅಥವಾ ನೀತಿ ಸಂಹಿತೆ ನಿಯಮಗಳನ್ನು ಉಲ್ಲಂಘಿಸುವ ಸರಕುಗಳನ್ನು ಸಾಗಿಸಲಾಗುವುದಿಲ್ಲ. ದಾಖಲೆಗಳಿಲ್ಲದೆ ಪ್ರಯಾಣಿಕರು ಬೆಲೆಬಾಳುವ ವಸ್ತುಗಳನ್ನು ಬಸ್‍ನಲ್ಲಿ ಸಾಗಿಸುವಂತಿಲ್ಲ. ನಿಮ್ಮ ಲಗೇಜ್‍ನಲ್ಲಿ ನೀವು ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ಬೋಷರ್ ಅಥವಾ ಬ್ಯಾನರ್ ಅನ್ನು ಹೊತ್ತಿದ್ದರೆ, ನೀವು ಸಂಬಂಧಿತ ದಾಖಲೆಗಳನ್ನು ಹಾಜರುಪಡಿಸಬೇಕು. ರಾಜಕೀಯ ಪ್ರಚಾರ ಸಾಮಗ್ರಿಗಳನ್ನು ಬಸ್‍ನಲ್ಲಿ ಅನುಮತಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಇದನ್ನು ಇತರ ಪ್ರಯಾಣಿಕರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಈ ಬಗ್ಗೆ ಸಂಸ್ಥೆಯ ಸುರಕ್ಷತೆ ಮತ್ತು ಜಾಗೃತ ವಿಭಾಗದ ಮುಖ್ಯಸ್ಥರು ಹಾಗೂ ಚಾಲಕರಿಗೆ ಮಾಹಿತಿ ನೀಡಿದ್ದಾರೆ.
ಲಗೇಜ್ ಸಾಗಿಸುವಾಗ ಬಸ್ ಸಿಬ್ಬಂದಿ ಲಗೇಜ್ ಶೇಖರಿಸುವವರು ಹಾಗೂ ಲಗೇಜ್ ಸ್ವೀಕರಿಸುವವರ ಮಾಹಿತಿ ಪಡೆಯಬೇಕು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲಗೇಜ್ ಗಳನ್ನು ಪರಿಶೀಲಿಸಬೇಕು. ಹಣ, ಚಿನ್ನ, ಬೆಳ್ಳಿ ಮುಂತಾದ ವಸ್ತುಗಳು ನಿಷೇಧಿಸಲಾಗಿದೆ.