Ad Widget .

ಮಂಗಳೂರು: ಗಾಂಜಾ ಮಾರಾಟ| ಇಬ್ಬರ ಬಂಧನ

ಸಮಗ್ರ ನ್ಯೂಸ್‌ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ತಿರುವೈಲ್‌ ಗ್ರಾಮದ ವಾಮಾಂಜೂರು ಗ್ರಾಮದಲ್ಲಿ ನಡೆದಿದೆ.

Ad Widget . Ad Widget .

ಆರೋಪಿಗಳನ್ನು ದೇರಳಕಟ್ಟೆ ಬೆಳ್ಮ ಗ್ರಾಮದ ಕನಕೂರು ಪದವು ಮನೆ ನಿವಾಸಿ ಅಶ್ರಫ್‌ ಯಾನೆ ಪೊಂಗ ಅಶ್ರಫ್‌ (30), ಅದೇ ಗ್ರಾಮದ ತಿಲಕನಗರ ನಿವಾಸಿ ಮೊಹಮ್ಮದ್‌ ಅಲ್ಫಾಜ್‌ (26) ಎಂದು ಗುರುತಿಸಲಾಗಿದೆ.

Ad Widget . Ad Widget .

ಆರೋಪಿಗಳಿಂದ 115 ಗ್ರಾಂ ಮೌಲ್ಯದ ಗಾಂಜಾ, ಮೊಬೈಲ್‌ ಫೋನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಪೊಲೀಸರು ವಶಕ್ಕೆ ಪಡೆದ ಸೊತ್ತುಗಳ ಒಟ್ಟು ಮೌಲ್ಯ 10,300 ರೂ. ಆಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎನ್‌.ಡಿ.ಪಿ.ಎಸ್‌ ಕಾಯ್ದೆ ಪ್ರಕರಣ ದಾಖಲಾಗಿರುತ್ತದೆ.

ಆರೋಪಿ ಅಶ್ರಫ್‌ ಯಾನೆ ಪೊಂಗ ಆಶ್ರಫ್‌ ಮೇಲೆ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ವಾರೆಂಟ್‌ ಜಾರಿಯಲ್ಲಿದೆ. ಈತ ಸುಮಾರು 6 ತಿಂಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

Leave a Comment

Your email address will not be published. Required fields are marked *