Ad Widget .

ಪಶ್ಚಿಮ ಬಂಗಾಳದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ನೇಮಕ

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಡಿಜಿಪಿ ಹುದ್ದೆಯಿಂದ ರಾಜೀವ್ ಕುಮಾರ್ ಅವರನ್ನು ವಜಾಗೊಳಿಸಿದ ನಂತರ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ವಿವೇಕ್ ಸಹಾಯ್ ಅವರನ್ನು ನೇಮಕ ಮಾಡಲಾಗಿದೆ.

Ad Widget . Ad Widget .

ವಿವೇಕ್ ಸಹಾಯ್ ಅವರಿಗೆ ರಾಜ್ಯ ಪೊಲೀಸ್ ಮುಖ್ಯಸ್ಥರ ಜವಾಬ್ದಾರಿಯನ್ನು ನೀಡಲಾಗಿದ್ದು, ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿವೇಕ್ ಸಹಾಯ್ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದಾರೆ.

Ad Widget . Ad Widget .

ವಿವೇಕ್ ಸಹಾಯ್ ಅವರು ಪಶ್ಚಿಮ ಬಂಗಾಳ ಕೇಡರ್‍ನ 1988 ಬ್ಯಾಚ್‍ನ ಐಪಿಎಸ್ ಅಧಿಕಾರಿ. ಅವರು ಈ ಹಿಂದೆ ಡೈರೆಕ್ಟರ್ ಜನರಲ್ (ಡಿಜಿ), ಪ್ರಾವಿಶನಿಂಗ್ ಮತ್ತು ಗೃಹರಕ್ಷಕರ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸಹಾಯ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಭದ್ರತೆಯ ಉಸ್ತುವಾರಿಯನ್ನು ಸಹ ವಹಿಸಿದ್ದರು. ಆದರೆ 2021 ರ ಮಾರ್ಚ್ ನಲ್ಲಿ ಸಿಎಂ ಮೇಲಿನ ದಾಳಿಯ ನಂತರ ಅವರನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿತು. ನಂತರ ಅವರನ್ನು ಭದ್ರತಾ ನಿರ್ದೇಶಕ ಹುದ್ದೆಗೆ ಭಡ್ತಿ ನೀಡಲಾಯಿತು.

Leave a Comment

Your email address will not be published. Required fields are marked *