Ad Widget .

ಮಹಾರಾಷ್ಟ್ರದಲ್ಲಿ ನಕ್ಸಲ್- ಪೊಲೀಸ್ ಚಕಮಕಿ/ ನಾಲ್ವರು ನಕ್ಸಲರ ಹತ್ಯೆ

ಸಮಗ್ರ ನ್ಯೂಸ್: ಪೊಲೀಸರು ಹಾಗೂ ನಕ್ಸಲರ ನಡುವೆ ಮಹಾರಾಷ್ಟ್ರದ ಗಡ್ಡಿರೋಲಿಯಲ್ಲಿ ಭಾರೀ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ನಕ್ಸಲರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

Ad Widget . Ad Widget .

ಮಹಾರಾಷ್ಟ್ರ ಪೊಲೀಸರ ವಿಶೇಷ ಸಿ-60 ಕಮಾಂಡೋಗಳು ಹಾಗೂ ಸಿಆರ್‍ಪಿಎಫ್ ಕಮಾಂಡೋಗಳು ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅನಾಹುತ ಸೃಷ್ಟಿಸಲು ಸಂಚು ರೂಪಿಸಿ ಅರಣ್ಯಗಳಲ್ಲಿ ಅಡಗಿ ಕುಳಿತಿದ್ದ ನಕ್ಸಲರನ್ನು ಹೊಡೆದುರುಳಿಸಿದ್ದಾರೆ.

Ad Widget . Ad Widget .

ನಕ್ಸಲರನ್ನು ಹಿಡಿದುಕೊಟ್ಟವರಿಗೆ 36 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಇದೀಗ ನಕ್ಸಲರು ಬಲಿಯಾಗಿದ್ದು, ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Leave a Comment

Your email address will not be published. Required fields are marked *