ಸಮಗ್ರ ನ್ಯೂಸ್: ತವರು ಜಿಲ್ಲೆ ಕೊಡಗು ಜಿಲ್ಲೆಯಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಎದುರಾಗಿದೆ. ಪರಿಣಾಮ ಬೇಸಿಗೆಯ ಆರಂಭದಲ್ಲಿಯೇ ಜೀವನದಿ ಎಂದು ಕರೆಸಿಕೊಳ್ಳುತ್ತಿದ್ದ ಕಾವೇರಿ ತನ್ನ ಹರಿಯುವಿಕೆಯನ್ನೇ ನಿಲ್ಲಿಸಿದ್ದಾಳೆ. ಪರಿಣಾಮ ಈ ಪಟ್ಟಣ ನದಿತಟದ ಮೇಲೆ ನೆಲೆ ನಿಂತಿದ್ದರೂ ಈಗ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದೆ.
ಕೊಡಗಿನಲ್ಲಿ ಹುಟ್ಟಿ ಜಿಲ್ಲೆಯ ನೂರಾರು ಗ್ರಾಮಗಳ ಮೂಲಕ ಹರಿಯುವ ಕಾವೇರಿ ಸಮೃದ್ಧಿಯಾಗಿಸಿತ್ತು. ಆದರೆ ಈಗ ತವರು ಬಿಟ್ಟು ಮುಂದೆ ಹರಿಯದ ಪರಿಸ್ಥಿತಿ ಎದುರಾಗಿದೆ. ನದಿಯ ಬಹುತೇಕ ಕಡೆ ಸಂಪೂರ್ಣ ಬತ್ತಿಹೋಗಿದ್ದು ತಗ್ಗು, ಗುಂಡಿ ಹಾಗೂ ಕಲ್ಲುಪೊಟರೆಗಳಲ್ಲಿ ಮಾತ್ರವೇ ನೀರು ನಿಂತಿದೆ. ಇದೇ ಕಾವೇರಿ ನದಿಯನ್ನೇ ಜೀವ ಜಲಕ್ಕಾಗಿ ನಂಬಿಕೊಂಡಿದ್ದ ಜಿಲ್ಲೆಯ ಕುಶಾಲನಗರ ಈಗ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುತ್ತಿದೆ.