Ad Widget .

ವಿಫಲಗೊಂಡ ಸಂಧಾನ/ ಈಶ್ವರಪ್ಪ ಸ್ಪರ್ಧೆ ಖಚಿತ

ಸಮಗ್ರ ನ್ಯೂಸ್: ಬಂಡಾಯದ ಬಾವುಟ ಹಾರಿಸಿರುವ ಈಶ್ವರಪ್ಪ ಅವರ ಕೋಪ ಶಮನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿದೆ. ಪುತ್ರ ಕೆ.ಇ.ಕಾಂತೇಶ್‍ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಈಶ್ವರಪ್ಪ ಮನೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್‍ವಾಲ್ ಮಾಜಿ ಸಚಿವ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ತು ಸದಸ್ಯ ರವಿಕುಮಾರ್, ಡಿ.ಎಸ್.ಅರಣ್ ಹಾಗೂ ಇತರೆ ನಾಯಕರು ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರಾದರೂ, ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಮ್ಮ ಪಟ್ಟು ಸಡಿಲಿಸಲಿಲ್ಲ. ಇದರಿಂದಾಗಿ ವರಿಷ್ಠರು ಬರಿಗೈಯಲ್ಲಿ ವಾಪಸ್ ತೆರಳಿದರು.

Ad Widget . Ad Widget .

ಸೋಮವಾರ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಆದರೆ, ತಾವು ಬಂಡಾಯದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಖಡಕ್ ಸಂದೇಶ ರವಾನಿಸಿದರು. ರಾಜ್ಯ ನಾಯಕರ ಮಾತುಕತೆ ವಿಫಲವಾದ ಬಳಿಕ, ಮಧ್ಯಾಹ್ನ ಸ್ವತಃ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಧಾಮೋಹನ್ ಅಗರ್‍ವಾಲ್ ಅವರು ಈಶ್ವರಪ್ಪ ಮನೆಗೆ ಭೇಟಿ ನೀಡಿದರು. ಆದರೆ, ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾತುಕತೆಯ ಮಧ್ಯದಲ್ಲಿಯೇ ಈಶ್ವರಪ್ಪ ಸಭೆಯಿಂದ ಹೊರಹೋದ ಕಾರಣ ಸಂಧಾನ ಫಲಪ್ರದವಾಗಲಿಲ್ಲ. ಬಳಿಕ ಮಧ್ಯಾಹ್ನ 1.30 ರವರೆಗೆ ಈಶ್ವರಪ್ಪ ಅವರಿಗಾಗಿ ಕಾದು ಕುಳಿತ ಕೇಂದ್ರ ನಾಯಕರ ನಿಯೋಗ, ಬಳಿಕ ಮನೆಯಿಂದ ವಾಪಸ್ಸಾಯಿತು.

Ad Widget . Ad Widget .

Leave a Comment

Your email address will not be published. Required fields are marked *