Ad Widget .

ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ

ಸಮಗ್ರ ನ್ಯೂಸ್: ಗಾಯಕಿ ಮಂಗ್ಲಿ ಅವರು ಕಾರು ಅಪಘಾತಕ್ಕೆ ಒಳಗಾಗಿದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ. ಬ್ಯಾಕ್ ಟು ಬ್ಯಾಕ್ ಕಾರ್ಯಕ್ರಮಗಳನ್ನು ನೀಡುತ್ತಿರುವ ಮಂಗ್ಲಿ ಈಗ ಕಾರ್ಯಕ್ರಮ ಮುಗಿಸಿ ಬರುವಾಗ ಈ ಘಟನೆ ನಡೆದಿದೆ.

Ad Widget . Ad Widget .

ಮಂಗ್ಲಿ ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ರಂಗಾ ರೆಡ್ಡಿ ಜಿಲ್ಲೆಯ ನಂದಿಗ್ರಾಮ ಕನ್ಹಾ ಆಧ್ಯಾತ್ಮಿಕ ಉತ್ಸವದಲ್ಲಿ ಮಂಗ್ಲಿ ಭಾಗವಹಿಸಿದ್ದರು. ಆ ಬಳಿಕ ಅವರು ಬೆಂಗಳೂರು-ಹೈದರಾಬಾದ್ ಹೈವೇ ಮೂಲಕ ನಿನ್ನೆ ಹೈದರಾಬಾದ್​ಗೆ ಬರುತ್ತಿದ್ದರು. ಶಂಶಾಬಾದ್ ತೊಂಡುಪಲ್ಲಿ ಬಳಿ ಕಾರು ಅಪಘಾತಕ್ಕೆ ಒಳಗಾಗಿದೆ. ಮಂಗ್ಲಿ ಕಾರಿಗೆ ಸಣ್ಣ ಟ್ರಕ್ ಗುದ್ದಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಇದ್ದ ಎಲ್ಲರಿಗೂ ಸಣ್ಣಪುಟ್ಟ ಗಾಯಗಳು ಆಗಿವೆ. ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *