Ad Widget .

ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕೂಜಿಮಲೆ ವ್ಯಾಪ್ತಿಯಲ್ಲಿ  ನಕ್ಸಲರು ಪ್ರತ್ಯಕ್ಷ|5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ  ಪ್ರತ್ಯಕ್ಷಗೊಂಡ ಕೆಂಪು ಉಗ್ರರು

ಸಮಗ್ರ ನ್ಯೂಸ್: ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ
8 ಜನರ ನಕ್ಸಲ್ ತಂಡ ಮಾ.16ರಂದು ಸಂಜೆ ಕೂಜಿಮಲೆ, ಕಲ್ಮುಖರ್  ಅಂಗಡಿಯೊಂದರಿಂದ 3500 ಸಾವಿರದಷ್ಟು ದಿನಸಿ ಖರಿದಿಸಿದ್ದಾರೆ.
ನಗದುಹಣ ನೀಡಿ ಸಾಮಗ್ರಿಗಳನ್ನು  ಖರೀದಿಸಿದ ನಕ್ಸಲರ ತಂಡದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

*ಕಾಲೂರು ಗ್ರಾಮದ ಗಡಿ ಗ್ರಾಮ ಕೂಜಿಮಲೆ*

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ಗಡಿ ಪ್ರದೇಶವಾದ ಕೂಜಿಮಲೆಯಲ್ಲಿ ಮಾ.16 ರಂದು ಸಂಜೆ ಕಾಣಿಸಿಕೊಂಡ ನಕ್ಸಲರು ಬೇರೆ ಕಡೆ ಸಂಚರಿಸಬಹುದು ಎಂದು ಊಹಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಇದೀಗ ಕೂಂಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ. ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರ್, ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ವ್ಯಾಪಿಸಿದೆ.

Ad Widget . Ad Widget . Ad Widget .

2012 ರಲ್ಲಿ  ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದರು ನಂತರ 2018 ರ
ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ಲೋಕಸಭಾ ಚುನಾವಣೆಯ ಸಂದರ್ಭ ಪ್ರತಿ ಬಾರಿಯೂ ಕೂಡ ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ಗೋಚರಿಸುತ್ತದೆ. ಚುನಾವಣೆಯ ಸಂದರ್ಭ ಮಾಮವಾದಿಗಳು ಗ್ರಾಮೀಣ ಪ್ರದೇಶದಲ್ಲಿರುವ, ಅರಣ್ಯ, ಬೆಟ್ಟಗುಡ್ಡ ಪ್ರದೇಶದಲ್ಲಿ ಹೊಂದಿಕೊಂಡಿರುವ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಆಗಿಂದಾಗೆ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *