ಸಮಗ್ರ ನ್ಯೂಸ್: ಮಂಗಳೂರು ಹಾಗೂ ರಾಮೇಶ್ವರಂ ನಡುವೆ ಹೊಸ ಸಾಪ್ತಾಹಿಕ ರೈಲು ಓಡಾಟಕ್ಕೆ ರೈಲ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದ್ದು, ದಿನಾಂಕ ಶೀಘ್ರವೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಶನಿವಾರ ಸಂಜೆ 7.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಭಾನುವಾರ ಬೆಳಗ್ಗೆ 11.45ಕ್ಕೆ ರಾಮೇಶ್ವರಂ ತಲುಪಲಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರದಿಂದ ಹೊರಡುವ ಈ ರೈಲು ಸೋಮವಾರ ಬೆಳಗ್ಗೆ 5.50ಕ್ಕೆ ಮಂಗಳೂರು ತಲುಪಲಿದೆ.
ನೂತನ ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಶೋರ್ನೂರು, ಪಾಲಕ್ಕಾಡ್, ಪೆÇಲ್ಲಾಚಿ, ಪಳನಿ, ದಿಂಡಿಗಲ್, ಮಧುರೈ ಮತ್ತು ರಾಮನಾಥಪುರಂ ಸೇರಿದಂತೆ 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದ್ದು, ನಾಲ್ಕು ಸಾಮನ್ಯ ಬೋಗಿಗಳ ಸಹಿತ ಒಟ್ಟು 22 ಬೋಗಿಗಳನ್ನು ರೈಲು ಹೊಂದಲಿದೆ.