ಸಮಗ್ರ ನ್ಯೂಸ್ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿಯನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಹರಸಾಹಸ ಪಡುವ ಆತಂಕದ ಕ್ಷಣಗಳು ಉಂಟಾಗಿವೆ.
ಭಾನುವಾರ ಸಂಜೆ ಕುದುರೆಮುಖ ಶಿಖರದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ನಾವೂರು ಗ್ರಾಮದ ತೊಳಲಿ ಏಳುಸುಟ್ಟು ಎಂಬ ಸ್ಥಳಕ್ಕೆ ಬೆಂಕಿ ವ್ಯಾಪಿಸಿದೆ. ಬಿಸಿಲಿನ ತಾಪ ಹಾಗೂ ಗಾಳಿಯ ರಭಸಕ್ಕೆ ಹಲವು ಗಿಡಗಳು ಒಣಗಿ ಬೆಂಕಿ ವ್ಯಾಪಿಸಿದ್ದು ನಿಯಂತ್ರಣಕ್ಕೂ ಕಷ್ಟವಾಗಿದೆ.
ನಾವೂರು ಮುಖ್ಯರಸ್ತೆಯಿಂದ ಸುಮಾರು 10 ಕಿ.ಮೀ ದೂರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಸಾಗಬೇಕಾಗಿದೆ. ಇಲ್ಲಿ ಯಾವುದೇ ಮೊಬೈಲ್ ನೆಟ್‍ವರ್ಕ್ ಲಭ್ಯವಿಲ್ಲ ಮತ್ತು ಇಲ್ಲಿಯೂ ನೀರು ಸಿಗದಿರುವುದು ಎಡವಟ್ಟಾಗಿದೆ.
ಭಾನುವಾರ ಸಂಜೆ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.