Ad Widget .

ಮಹಿಳಾ ಐಪಿಎಲ್| ಈ ಬಾರಿ ಕಪ್ ಎತ್ತಿದ ಆರ್ ಸಿಬಿ| ‘ಕಪ್ ನಮ್ದೇ’ ಎಂದು ಸಂಭ್ರಮಿಸಿದ ಮಹಿಳಾಮಣಿಗಳು

ಸಮಗ್ರ ನ್ಯೂಸ್: ಪ್ರತೀ ಬಾರಿ ಐಪಿಎಲ್ ಇರಲಿ, ಡಬ್ಲ್ಯುಪಿಎಲ್ ಇರಲಿ ಆರ್ ಸಿಬಿ ಕಣಕ್ಕಿಳಿದಾಗ ಅಭಿಮಾನಿಗಳು, ಆಟಗಾರರು ಹೇಳುವುದು ಇದೊಂದೇ ಮಾತು. ಅದನ್ನು ಕೊನೆಗೂ ಈಗ ಮಹಿಳೆಯರು ನಿಜ ಮಾಡಿಯೇ ಬಿಟ್ಟರು. ಈ ಕ್ಷಣ ಸಾಕ್ಷಿಯಾದ ಅಸಂಖ್ಯಾತ ಅಭಿಮಾನಿಗಳೂ ಭಾವುಕರಾದರು.

Ad Widget . Ad Widget .

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಕನ್ನಡತಿ ಶ್ರೇಯಾಂಕ ಪಾಟೀಲ್ 4 ವಿಕೆಟ್ ಕಬಳಿಸಿದ್ದೂ ಪ್ರಮುಖ ಕಾರಣ. ಪವರ್ ಪ್ಲೇನಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟರು ಆದರೆ ಕೊನೆಯ ಓವರ್ ಗಳಲ್ಲಿ ಆರ್ ಸಿಬಿ ಅತ್ಯುತ್ತಮ ಬೌಲಿಂಗ್ ನಡೆಸಿತು. ಇದರಿಂದಾಗಿ ಡೆಲ್ಲಿಯ ಪ್ರಬಲ ಬ್ಯಾಟಿಂಗ್ ನ್ನೂ ಕೇವಲ 113 ರನ್ ಗೆ ಕಟ್ಟಿ ಹಾಕಿತು. ಆರ್ ಸಿಬಿ ಬೌಲಿಂಗ್ ಕಳೆದ ಮೂರು ಪಂದ್ಯಗಳಲ್ಲಿ ಅತ್ಯುತ್ತಮವಾಗಿತ್ತು ಎನ್ನುವುದಕ್ಕೆ ಇದೇ ಸಾಕ್ಷಿಯಾಯಿತು.

Ad Widget . Ad Widget .

ಈ ಮೊತ್ತ ಬೆನ್ನತ್ತಿದ ಆರ್ ಸಿಬಿಗೆ ಸ್ಮೃತಿ ಮಂಧಾನ-ಸೋಫಿ ಡಿವೈನ್ ಅತ್ಯುತ್ತಮ ಆರಂಭ ನೀಡಿದರು. ಇಷ್ಟು ದಿನ ಒತ್ತಡದಲ್ಲಿ ಆಡುವುದಿಲ್ಲ ಎಂಬ ಟೀಕೆಗಳಿಗೆ ಸ್ಮೃತಿ ಇಂದು ತಕ್ಕ ಉತ್ತರ ನೀಡಿದರು. ಸೋಫಿ 27 ಎಸೆತಗಳಲ್ಲಿ 32 ರನ್ ಗಳಿಗೆ ಔಟಾದರೆ ಸ್ಮೃತಿ ತಾಳ್ಮೆಯ ಆಟವಾಡಿ 31 ರನ್ ಗಳಿಸಿದರು. ಈ ಇಬ್ಬರೂ ಔಟಾದ ಬಳಿಕ ಆರ್ ಸಿಬಿಗೆ ಕುಸಿತದ ಭಯವಿತ್ತು. ಆದರೆ ಮತ್ತೊಮ್ಮೆ ಎಲ್ಲಿಸ್ ಪೆರ್ರಿ, ರಿಚಾ ಘೋಷ್ ತಂಡದ ಕೈ ಹಿಡಿದರು. ಪೆರ್ರಿ 37 ಎಸೆತಗಳಿಂದ 35 ರನ್ ಗಳಿಸಿದರೆ ರಿಚಾ 14 ಎಸೆತಗಳಿಂದ 17 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗುಳಿದರು. ಅಂತಿಮವಾಗಿ ಆರ್ ಸಿಬಿ 19.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 115 ರನ್ ಗಳಿಸುವ ಮೂಲಕ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ವಿಶೇಷವೆಂದರೆ ಡೆಲ್ಲಿ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಗೆಲುವಿನ ರನ್ ಗಳಿಸಲಾಗದೇ 1 ರನ್ ನಿಂದ ಸೋತಾಗ ಕ್ರೀಸ್ ನಲ್ಲೇ ಕುಸಿದು ಕಣ್ಣೀರು ಹಾಕಿದ್ದ ರಿಚಾ ಘೋಷ್ ಇಂದು ತಾವೇ ಆರ್ ಸಿಬಿಗೆ ಮೊದಲ ಬಾರಿಗೆ ಕಪ್ ಗೆದ್ದುಕೊಟ್ಟ ವಿಜಯದ ರನ್ ಹೊಡೆದಿದ್ದು ವಿಶೇಷ. ಅದೂ ಬೌಂಡರಿ ಮೂಲಕ ಭರ್ಜರಿ ಫಿನಿಶ್ ನೀಡಿದರು.

ಈ ಟೂರ್ನಮೆಂಟ್ ನಲ್ಲಿ ಆರಂಭಿಕ ಪಂದ್ಯಗಳಲ್ಲಿ ಸಾಧಾರಣ ತಂಡವಾಗಿದ್ದ ಆರ್ ಸಿಬಿ ಕೊನೆಯ ಮೂರು ಪಂದ್ಯಗಳಲ್ಲಿ ನೀಡಿದ ನಿರ್ವಹಣೆಯಿಂದ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ ಅಭಿಮಾನಿಗಳ ದಶಕದ ಕನಸು ನನಸು ಮಾಡಿತು. ಆರ್ ಸಿಬಿ ಅಭಿಮಾನಿಗಳ ಖುಷಿಗೆ ಮೇರೆಯೇ ಇಲ್ಲದಾಗಿದೆ.

Leave a Comment

Your email address will not be published. Required fields are marked *