Ad Widget .

ದ.ಕ. – ಉಡುಪಿ ಗಡಿಯಲ್ಲಿ ಚೆಕ್‌ಪೋಸ್ಟ್ ಕಾರ್ಯಾರಂಭ

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣೆ ಅಕ್ರಮಗಳ ನಿಗ್ರಹಕ್ಕಾಗಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಗಡಿಭಾಗವಾಗಿರುವ ಹೆಜ ಮಾಡಿಯಲ್ಲಿ ಈಗಾಗಲೇ ಚೆಕ್‌ಪೋಸ್ಟ್ ಕಾರ್ಯಾರಂಭ ಮಾಡಿದೆ. ಇದೇ ವೇಳೆ ಟೋಲ್‌ಗೇಟ್ ತಪ್ಪಿಸಿ ಸಾಗಲು ವಾಹನ ಸವಾರರು ಬಳಸಿಕೊಳ್ಳುತ್ತಿದ್ದ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪಲಿಮಾರು – ಕರ್ನಿರೆ ಭಾಗ ದಲ್ಲೂ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಸೂಕ್ತ ಜಾಗದ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ.

Ad Widget . Ad Widget .

ಪಲಿಮಾರು ಗ್ರಾಮದಿಂದ ಕರ್ನಿರೆ, ಬಳ್ಕುಂಜೆ ಮಾರ್ಗವಾಗಿ ದ.ಕ. ಜಿಲ್ಲೆಯ ಮೂಲ್ಕಿಯನ್ನು ಸಂಪರ್ಕಿಸುವ ಮಾರ್ಗದಲ್ಲಿ ನೀರು, ವಿದ್ಯುತ್, ಶೌಚಾಲಯ ಮುಂತಾದ ಮೂಲ ಸೌಕರ್ಯಗಳ ಸಹಿತ ಈ ಚೆಕ್‌ಪೋಸ್ಟ್ ನಿರ್ಮಾಣವಾಗಬೇಕಿದೆ. ಪಲಿಮಾರು ಮಠದ ಬಳಿ ಇದನ್ನು ನಿರ್ಮಿಸುವ ಇರಾದೆಯನ್ನು ಹೊಂದಲಾಗಿದ್ದು, ಭರದಿಂದ ಸಿದ್ಧತೆ ನಡೆಸಲಾಗಿದೆ.

Ad Widget . Ad Widget .

ದಳಿ ಚೆಕ್‌ಪೋಸ್ಟ್ನಲ್ಲಿ
ವಾಹನ ತಪಾಸಣೆ ಆರಂಭ

ಲೋಕಸಭಾ ಚುನಾವಣೆ ಘೋಷಣೆ ಯಾದ ಹಿನ್ನೆಲೆಯಲ್ಲಿ ಕೊಲ್ಲೂರಿನ ದಳಿ ಬಳಿಯ ಚೆಕ್ ಪೋಸ್ಟ್ನಲ್ಲಿ ಪೊಲೀಸರು ವಾಹನಗಳ ಕಟ್ಟುನಿಟ್ಟಿನ ತಪಾಸಣೆ ಆರಂಭಿಸಿದ್ದಾರೆ.

ಅಂತಾರಾಜ್ಯ, ಅಂತರ್ ಜಿಲ್ಲೆ ಗಳಿಂದ ಕೊಲ್ಲೂರು ಸಹಿತ ಬೈಂದೂರು, ಕುಂದಾಪುರ ಮುಂತಾದ ಕಡೆಗೆ ಸಾಗುವ ವಾಹನಗಳ ತಪಾಸಣೆ ಬಿಗಿಗೊಳಿಸಲಾಗಿದೆ. ಕೊಲ್ಲೂರು ಎಸ್‌ಐ ಜಯಶ್ರೀ ಹಾಗೂ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ತಪಾಸಣೆ ನಡೆಯುತ್ತಿದೆ. ಅನುಮಾನಾಸ್ಪದ ವಾಹನಗಳ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸ್ ವರಿಷ್ಠಾ ಧಿಕಾರಿಗಳು ಸೂಚಿಸಿರುವ ಹಿನ್ನೆಲೆಯಲ್ಲಿ ಚೆಕ್ ಪೋಸ್ಟ್ ಅನ್ನು ಸುಸಜ್ಜಿತಗೊಳಿಸಲಾಗುತ್ತಿದೆ.

Leave a Comment

Your email address will not be published. Required fields are marked *