Ad Widget .

ರಾಷ್ಟ್ರಪತಿಯವರಿಗೆ ಆಯೋಗದ ಶಿಫಾರಸು/ ಆರಂಭಗೊಂಡಿತು ಚುನಾವಣಾ ಪ್ರಕ್ರಿಯೆ

ಸಮಗ್ರ ನ್ಯೂಸ್: ಕೇಂದ್ರದ ಸಚಿವ ಸಂಪುಟ ಚುನಾವಣಾ ಆಯೋಗದ ಶಿಫಾರಸನ್ನು ರಾಷ್ಟ್ರಪತಿಯವರಿಗೆ ರವಾನಿಸಿದ್ದು, ಈ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಭಾನುವಾರ ಆರಂಭಗೊಂಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಏಳು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣಾ ಸಂಬಂಧ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಲಾಗಿದೆ. ಅಧಿಸೂಚನೆ ನಂತರದಲ್ಲಿ ನಿರ್ದಿಷ್ಟ ಕಾಲಮಿತಿಯಲ್ಲಿ ನಾಮನಿರ್ದೇಶನ ಪ್ರಕ್ರಿಯೆ ನಡೆಯುತ್ತದೆ.

Ad Widget . Ad Widget .

ಲೋಕಸಭಾ ಚುನಾವಣೆಯು ಮೊದಲ ಹಂತದಲ್ಲಿ ಏ.19ರಂದು 102 ಕ್ಷೇತ್ರಗಳಿಗೆ ನಡೆಯಲಿದ್ದು, ಮಾ.20ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 14(2)ರ ಅಡಿಯಲ್ಲಿ ಚುನಾವಣಾ ಆಯೋಗ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ. ಅದಾದ ಬಳಿಕ ಕಾನೂನು ಸಚಿವಾಲಯ ಸಚಿವ ಸಂಪುಟ ಮುಂದೆ ಇಡುತ್ತದೆ. ಬಳಿಕ, ಸಚಿವ ಸಂಪುಟವು ಅಧಿಸೂಚನೆ ಹೊರಡಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡುತ್ತದೆ.

Ad Widget . Ad Widget .

Leave a Comment

Your email address will not be published. Required fields are marked *