Ad Widget .

ಬೆಳ್ಳಾರೆ : ಸುಲಿದು ಇಟ್ಟಿದ್ದ 5 ಗೋಣಿ ಅಡಿಕೆ ಕಳವು

ಸಮಗ್ರ ನ್ಯೂಸ್ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಲಿದು ದಾಸ್ತಾನು ಇಟ್ಟಿದ್ದ 5 ಗೋಣಿ ಅಡಿಕೆ ಕಳವಾಗಿರುವ ಘಟನೆ ಸುಳ್ಯದ ಕುಳ್ಳಂಪಾಡಿ ಎಂಬಲ್ಲಿ ನಡೆದಿದೆ.

Ad Widget . Ad Widget .

ಕುಳ್ಳಂಪಾಡಿ ಗ್ರಾಮ ನಿವಾಸಿ ಹಿರಿಯಣ್ಣ ಗೌಡ (54) ಎಂಬವರು ಮಾರ್ಚ್ 14 ರಂದು ಸಂಜೆ ತನ್ನ ಕುಟುಂಬ ಸಮೇತ ಪುತ್ತೂರು ತಾಲೂಕು ಮಾಡಾವಿನಲ್ಲಿರುವ ತನ್ನ ಅಕ್ಕನ ಮನೆಗೆ ಹೋದವರು ರಾತ್ರಿ ವಾಪಾಸು ಮನೆಗೆ ಬಂದಿದ್ದು, ಮರುದಿನ ಬೆಳಿಗ್ಗೆ ಎದ್ದು, ಕೊಟ್ಟಿಗೆಗೆ ಹೋಗಿ ನೋಡಿದಾಗ ಕೊಟ್ಟಿಗೆಯಲ್ಲಿ ಸುಮಾರು ಒಂದು ವಾರಗಳಿಂದ ಸುಲಿದು ದಾಸ್ತಾನು ಇಟ್ಟಿರುವ 15 ಅಡಿಕೆ ತುಂಬಿದ ಗೋಣಿ ಚೀಲಗಳ ಪೈಕಿ 5 ಅಡಿಕೆ ತುಂಬಿದ ಗೋಣಿ ಚೀಲಗಳು ಕಳ್ಳತನವಾಗಿದೆ.

Ad Widget . Ad Widget .

ಇವುಗಳನ್ನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಕಳವಾದ 5 ಗೋಣಿಚೀಲಗಳಲ್ಲಿ ಸುಮಾರು 2.5 ಕ್ವಿಂಟಾಲ್ ಅಡಿಕೆ ಇದ್ದು ಅಂದಾಜು 1 ಲಕ್ಷ ರೂ ಮೌಲ್ಯದ್ದಾಗಿದೆ. ಘಟನೆ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ : 30/2024, ಕಲಂ 380 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Leave a Comment

Your email address will not be published. Required fields are marked *