Ad Widget .

ಪಾನಿಪುರಿ ಸೇವಿಸಿ 19 ಮಕ್ಕಳು ಅಸ್ವಸ್ಥ

ಸಮಗ್ರ ನ್ಯೂಸ್: ಪಾನಿಪುರಿಯನ್ನು ಸೇವಿಸಿ 19 ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದಿದೆ. ಈ ಮಕ್ಕಳು ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಉಪವಾಸ ಇದ್ದರು. ಉಪವಾಸ ಮುಗಿದ ನಂತರ ಮಸೀದಿ ಬಳಿ ಪಾನಿಪುರಿ ಸೇವಿಸಿದ್ದಾರೆ. ಬಳಿಕ ವಾಂತಿ ಭೇದಿ, ಹೊಟ್ಟೆ ನೋವಿನಿಂದ 19 ಮಕ್ಕಳು ಬಳಲಿದ್ದಾರೆ.

Ad Widget . Ad Widget .

ಇವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿರುವ ತಹಶೀಲ್ದಾರ್ ಗುರು ಬಸವರಾಜ್ ಮತ್ತು ಜಿಪಂ ಸಿಇಓ ಸುರೇಶ್ ಹಿಟ್ನಾಳ್​ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಈ ಘಟನೆ ಬಳಿಕ ಪಾನಿಪುರಿ ಅಂಗಡಿ‌ ಮಾಲೀಕ ಪರಾರಿ ಆಗಿದ್ದಾನೆ. ಇದುವರೆಗೆ ಯಾರು ದೂರು ನೀಡಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *