Ad Widget .

ಕಲಬುರಗಿಯಲ್ಲಿ ನಮೋ ಮೇನಿಯಾ…ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ಸಮಗ್ರ ನ್ಯೂಸ್: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಇಂದು ಮೋದಿ ಮೇನಿಯಾ ಜೋರಾಗಿಯೆ ನಡೆದಿದೆ. ಲೋಕಸಭಾ ಚುನಾವಣೆಗೂ ಮುಂಚೆ ಕಲಬುರಗಿಯಲ್ಲಿ ನಮೋ ಬೃಹತ್ ಸಮಾವೇಶ ನಡೆಸುವುದರ ಜೊತೆಗೆ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿದ್ದಾರೆ. ಕಲಬುರಗಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Ad Widget . Ad Widget .

ಕಲಬುರಗಿ ಜನತೆಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ಮೋದಿ, ನಾನು ಹೆಲಿಪ್ಯಾಡ್​​ನಿಂದ ಬರುವಾಗ ರಸ್ತೆಯಲ್ಲಿ ಜನರ ಉತ್ಸಾಹ ನೋಡಿ ನನಗೆ ಬಹಳ ಸಂತಸವಾಯಿತು. ನಾನು 2 ದಿನಗಳಲ್ಲಿ 4 ದಕ್ಷಿಣ ರಾಜ್ಯಗಳಿಗೆ ಭೇಟಿ ನೀಡಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಜನ ಬಿಜೆಪಿ ಬಗ್ಗೆ ಉತ್ಸುಕತರಾಗಿದ್ದಾರೆ. ಜನರ ಉತ್ಸಾಹ ನೋಡಿ ನನಗೆ ಬಹಳ ಆನಂದವಾಯಿತು ಎಂದರು. ಜತೆಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಎಂದು ಘೋಷಣೆ ಕೂಗಿದರು.

Ad Widget . Ad Widget .

ಕರ್ನಾಟಕದಲ್ಲಿ ಕಾಂಗ್ರೆಸ್​​ ಬಗ್ಗೆ ಜನ ಆಕ್ರೋಶಗೊಂಡಿದ್ದಾರೆ. ಕಾಂಗ್ರೆಸ್​ ಸರ್ಕಾರ ಇಷ್ಟು ಬೇಗ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಜನರ ಮನಸ್ಸಿನಲ್ಲಿ ಭರವಸೆಯೇ ಇಲ್ಲದಂತಾಗಿದೆ. ಕಾಂಗ್ರೆಸ್​ ಸರ್ಕಾರ ಲೂಟಿಯಲ್ಲಿ ತೊಡಗಿದೆ. ಕಾಂಗ್ರೆಸ್​ಗೆ ಭ್ರಷ್ಟಾಚಾರವೇ ಉಸಿರಾಗಿದೆ. ಚುನಾವಣೆಗೂ ಮೊದಲೇ ದೊಡ್ಡದೊಡ್ಡ ಭರವಸೆ ನೀಡಿದರು. ಚುನಾವಣೆ ಬಳಿಕ ನಿಮ್ಮ ಜೇಬಿಗೆ ಕೈಹಾಕಿದರು ಎಂದು ಮೋದಿ ವಾಗ್ದಾಳಿ ನಡೆಸಿದರು.

Leave a Comment

Your email address will not be published. Required fields are marked *