ಬಂಟ್ವಾಳ : ಸ್ಕೂಟರ್ ಕಳ್ಳತನ ಪ್ರಕರಣ ದಾಖಲು

ಸಮಗ್ರ ನ್ಯೂಸ್ : ಗ್ಯಾರೇಜ್ ಬಳಿ ನಿಲ್ಲಿಸಲಾಗಿದ್ದ ಸ್ಕೂಟರ್ ಕಳವಾದ ಘಟನೆ ಬಂಟ್ವಾಳ ತಾಲೂಕಿನ ಅಮ್ಮಾಡಿ ಗ್ರಾಮದ ಜೈದುರ್ಗ ಗ್ಯಾರೇಜ್ ಬಳಿ ನಡೆದಿದೆ.

Ad Widget ... ..

ಇಲ್ಲಿನ ನಿವಾಸಿ ಸುರೇಶ್ (37) ಎಂಬವರ ಆಕ್ಸಿಸ್ ಸ್ಕೂಟರ್ ( KA 20 EE1584) ಕಳವಾಗಿದೆ. ಇವರು ತನ್ನ ಎಕ್ಸಿಸ್ ಸ್ಕೂಟರನ್ನು ಮಾ 12 ರಂದು ಸಂಜೆ ಅಮ್ಮಾಡಿ ಗ್ರಾಮದ ಜೈದುರ್ಗ ಗ್ಯಾರೆಜ್ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದು, ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಸ್ಕೂಟರ್ ಕಳವಾಗಿರುವುದು ಬೆಳಕಿಗೆ ಬಂದಿದೆ.

Ad Widget

ಕಳವಾದ ಸ್ಕೂಟರ್ ಮೌಲ್ಯ 45 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 57/2024 ಕಲಂ:379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Leave a Comment

Your email address will not be published. Required fields are marked *