Ad Widget .

ಬೆಂಗಳೂರಿನಲ್ಲಿ ಮಾನವ ಕಳ್ಳಸಾಗಣೆ ಆರೋಪ, NCPCR ದಾಳಿ, 20 ಬಾಲಕಿಯರು ಪತ್ತೆ

ಸಮಗ್ರ ನ್ಯೂಸ್: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶುಕ್ರವಾರ ಬೆಂಗಳೂರಿನಲ್ಲಿ ಮಾನವ ಕಳ್ಳ ಸಾಗಣೆ ಶಂಕೆಯ ಮೇಲೆ ಅಧ್ಯಕ್ಷ ಹಾಗೂ ಸಿಬ್ಬಂದಿಗಳಿಂದ ದಾಳಿ ನಡೆಸಲಾಗಿದೆ. ಅಧ್ಯಕ್ಷ ಪ್ರಿಯಾಂಕ್ ಕಂಗೂನ್ ನೇತೃತ್ವದಲ್ಲಿ ದಾಳಿ ಮಾಡಿದ್ದು, ದಾಳಿ ವೇಳೆ 20 ಬಾಲಕಿಯರು ಪತ್ತೆ ಆಗಿದ್ದಾರೆ. ಪತ್ತೆಯಾದವರನ್ನು ಗಲ್ಫ್​ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ. ಸದ್ಯ ಎಫ್​​ಐಆರ್​ ದಾಖಲಿಸುವಂತೆ ಸಂಪಿಗೇಹಳ್ಳಿ ಠಾಣೆಯಲ್ಲಿ ಎನ್​​ಸಿಪಿಸಿಆರ್ ಅಧ್ಯಕ್ಷ ಹಾಗೂ ಸಿಬ್ಬಂದಿ ಆಗ್ರಹಿಸಿದ್ದಾರೆ.

Ad Widget . Ad Widget .

ಈ ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದರು. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಯಾವುದೇ ಲೈಸೆನ್ಸ್ ಇಲ್ಲದೆ ಮದರಸವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸದ್ಯ ಎನ್​ಸಿಪಿಸಿಆರ್​ ದೂರು ಆಧರಿಸಿ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Ad Widget . Ad Widget .

ಈ ಬಗ್ಗೆ ಎಕ್ಸ್​​ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಕಂಗೂನ್​, ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬು ಮಹಿಳೆ ಮತ್ತು ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೂಂಡಾಗಳನ್ನು ನಿಯಂತ್ರಿಸಲಾಗಿದೆ. ಪೊಲೀಸರ ಸಲಹೆ ಮೇರೆಗೆ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ಬರಲಾಗಿದೆ. ದಾಳಿ ವೇಳೆ ಕೆಲ ಹುಡುಗಿಯರು ಮಾತನಾಡಿದ್ದು, ಸಲ್ಮಾ ಎಂಬ ಮಹಿಳೆ ಕುವೈತ್‌ನಲ್ಲಿರುವ ಹುಡುಗಿಯರ ಸಂಬಂಧಗಳನ್ನು ಏರ್ಪಡಿಸುತ್ತಾಳೆ ಎಂದು ಆರೋಪ ಮಾಡಿದ್ದಾರೆ.

ಸದ್ಯ ಅಲ್ಲಿ ಯಾವುದೇ ಬೇರೆ ರೀತಿಯ ಚಟುವಟಿಕೆಗಳು ನಡೆದಿರೋ ಬಗ್ಗೆ ಮಾಹಿತಿ ಇಲ್ಲ. ಬಹುತೇಕ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ನಾಳೆ ಮಕ್ಕಳ ಆಯೋಗಕ್ಕೆ ಮಾಹಿತಿ ನೀಡ್ತೀವಿ. ಅವರು ಮದರಸ ಪರಿಶೀಲನೆ ಬಳಿಕ ದೂರು ಕೊಟ್ಟರೇ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ. ಎಂದರು

Leave a Comment

Your email address will not be published. Required fields are marked *