ಮೂಡುಬಿದಿರೆ: ಪತ್ನಿ ಆತ್ಮಹತ್ಯೆ|ಪತಿ ಅರೆಸ್ಟ್

ಸಮಗ್ರ ನ್ಯೂಸ್ : ದಂಪತಿಗಳ ನಡುವೆ ಅಕ್ರಮ ಸಂಬಂಧದ ಬಗ್ಗೆ ಆರೋಪಗಳು ನಡೆದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Ad Widget ... ..

ಮೂಡುಬಿದಿರೆಯಲ್ಲಿ ಲಕ್ಷ್ಮೀ ಅಯ್ಯಂಗಾರ್ ಬೇಕರಿ ನಡೆಸುತ್ತಿದ್ದ ನಿಂಗರಾಜು ಬಂಧಿತ ಆರೋಪಿ , ಆತನ ಪತ್ನಿ ಪ್ರತಿಮಾ (34) ಆತ್ಮಹತ್ಯೆ ಮಾಡಿಕೊಂಡವರು.

Ad Widget

ದಂಪತಿಗಳಿಗೆ ಹನ್ನೆರಡು ವರ್ಷಗಳ ಹಿಂದೆ ಮದುವೆಯಾಗಿದ್ದು, ಅಯ್ಯಂಗಾರ್ ಬೇಕರಿ ನಡೆಸುತ್ತಾ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗಂಡನ ಆರೋಪ ಮತ್ತು ತಿರಸ್ಕಾರದ ಮಾತುಗಳಿಂದ ಮನನೊಂದ ಪ್ರತಿಮಾ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Comment

Your email address will not be published. Required fields are marked *