ವಿಟ್ಲ: ಅಡಿಕೆ, ಕರಿಮೆಣಸು ಕಳ್ಳತನ|ಪ್ರಕರಣ ದಾಖಲು

ಸಮಗ್ರ ನ್ಯೂಸ್ : ಕೊಠಡಿಯಲ್ಲಿಟ್ಟಿದ್ದ ಅಡಿಕೆ ಮತ್ತು ಕರಿಮೆಣಸು ಕಳ್ಳತನ ವಾಗಿರುವ ಘಟನೆ ವಿಟ್ಲದ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿನ ಮನೆಯ ಸಮೀಪ ನಡೆದಿದೆ.

Ad Widget ... ..

ಕುಡ್ತಮುಗೇರು ಕೆ. ಅಣ್ಣು ಸಪಲ್ಯ (62) ಅವರು ಒಣಗಿಸಿ ಸುಲಿಯದ ಅಡಿಕೆ (ಅಂದಾಜು 150 ಕೆ.ಜಿ.) ಮತ್ತು 4 ಗೋಣಿಚೀಲದಲ್ಲಿ ಒಣಗಿದ ಕರಿಮೆಣಸು (ಅಂದಾಜು 30 ಕೆ.ಜಿ.)ಗಳನ್ನು ಸಂಗ್ರಹಿಸಿಟ್ಟಿದ್ದರು.

Ad Widget

ಕೊಠಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ, ಅಡಿಕೆ ಮತ್ತು ಕಾಳುಮೆಣಸು ಕಳ್ಳತನ ಆಗಿರುವುದು ತಿಳಿಯಿತು. ಕಳ್ಳತನವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 57,000 ರೂ. ಆಗಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *