Ad Widget .

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜಾತ್ರೆ ಆರಂಭ

ಸಮಗ್ರ ನ್ಯೂಸ್ : ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾ. 14ರಂದು ಗುರುವಾರ ರಾತ್ರಿ ಧ್ವಜಾರೋಹಣ ನೆರವೇರಿತು.

Ad Widget . Ad Widget .

ಮಾ.15ರಂದು ಶುಕ್ರವಾರ ಬೆಳಗ್ಗೆ ಸಂಪ್ರದಾಯದAತೆ ನಡೆದ ಕುದಿ ಕರೆಯುವ(ಆರಡ) ಕಾರ್ಯದಲ್ಲಿ ಮಾ.14 ರಿಂದ ಎ.12ರ ವರೆಗೆ 29 ದಿನಗಳ ಜಾತ್ರೆ ಎಂಬುದು ನಿರ್ಧಾರವಾಯಿತು. ಅಂತೆಯೇ ಎ.6 ರಂದು ಪ್ರಥಮ ಚೆಂಡು, ಎ.10ರಂದು ಬುಧವಾರ ಕಡೇ ಚೆಂಡು ಹಾಗೂ ಎ.11 ಗುರುವಾರದಂದು ಬ್ರಹ್ಮರಥೋತ್ಸವ ನೆರವೇರಲಿದೆ.

Ad Widget . Ad Widget .

ಕ್ಷೇತ್ರದಲ್ಲಿ ನಡೆಯುವ ಸಂಪ್ರದಾಯ: ನಟ್ಟೋಜ ಮನೆತನದ ವ್ಯಕ್ತಿಯೊಬ್ಬರು ಧ್ವ ಜಾರೋಹಣದ ಮುಂಚಿನ ದಿನ ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಿ ಪುತ್ತಿಗೆ ಸೋಮನಾಥ ಜೋಯಿಸರ ಮನೆಗೆ ತೆರಳಿ ಜೋತಿಷ್ಯದ ಮಣೆಯ ಕವಡೆಯಲ್ಲಿ ಜಾತ್ರೆಯ ದಿನವನ್ನು ನಿಶ್ಚಯಿಸಿ ಪೊಳಲಿಗೆ ಬರುತ್ತಾರೆ. ಧ್ವಜಾರೋಹಣದ ದಿನ ಸಂಜೆ ಕ್ಷೇತ್ರಕ್ಕೆ ಬಂದ ನಟ್ಟೋಜರು ಜೋತಿಷ್ಯರು ನೀಡಿದ ಹಿಂಗಾರದ ಹಾಳೆಯನ್ನು ದೇವರ ಗರ್ಭಗುಡಿಯಲ್ಲಿ ಇರಿಸಿ ಪ್ರಸಾದ ಸ್ವೀಕರಿಸುತ್ತಾರೆ.

ಆ ದಿವಸ ರಾತ್ರಿ ಉಳ್ಳಾಲ ಶ್ರೀ ಭಗವತೀ ಕ್ಷೇತ್ರಕ್ಕೆ ಒಳಪಟ್ಟ ತೀಯಾ ಸಮಾಜ ಬಾಂದವರ ಕೇಂದ್ರಸ್ಥಾನವಾದ ಅಡ್ಡೂರು ನಂದ್ಯಾ ಕ್ಷೇತ್ರದಿಂದ ಶ್ರೀ ಭಗವತೀ ಮಾತೆಯ ಸಾನಿಧ್ಯದಿಂದ ಶ್ರೀ ಭದ್ರಕಾಳಿ ದೇವಿಯ ಬಿಂಬ, ಅರಸು ದೈವದ ಆಯುಧ, ಬೆತ್ತದಿಂದ ತಯಾರಿಸಿದ ಕದೃಮುಡಿಯೊಂದಿಗೆ ಫಲ್ಗುಣಿ ನದಿಯನ್ನು ದೋಣಿಯ ಮೂಲಕ ದಾಟಿ ತೂಟೆದಾರದೊಂದಿಗೆ ತೀಯಾ ಸಮಾಜ ಭಾಂದವರು ಹಾಗೂ ಭಕ್ತವೃಂದ ಕಾಲ್ನಡಿಗೆಯಲ್ಲೇ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಅವರನ್ನು ಕ್ಷೇತ್ರದ ಆಡಳಿತ ಮಂಡಳಿಯವರು ಗೌರವ ಪೂರ್ವಕವಾಗಿ ಬರಮಾಡಿಕೊಳ್ಳುತ್ತಾರೆ. ಉಳಿಪಾಡಿ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮಿಸುತ್ತದೆ. ಅದನ್ನು ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರು ಗೌರವ ಪೂರ್ವಕವಾಗಿ ಸ್ವಾಗತಿಸಿ ಕ್ಷೇತ್ರಕ್ಕೆ ಬರಮಾಡಕೊಳ್ಳುತ್ತಾರೆ. ಆ ಬಳಿಕ ಧ್ವಜಾರೋಹಣವಾಗುತ್ತದೆ. ಮರುದಿನ ಬೆಳಿಗ್ಗೆ ಕಂಚಿಲ್ದ ಬಲಿ(ಕಂಚುಬೆಳಕು) ಹೊರಡುತ್ತದೆ. ಕಂಚಿಲ್ದ ಬಲಿ ಮುಗಿದು ರಥೋತ್ಸವ ಜರಗುತ್ತದೆ.

ಆ ಬಳಿಕ ಕ್ಷೇತ್ರದ ಆಡಳಿತ ಮಂಡಳಿಯವರ ಒಪ್ಪಿಗೆ ಬಂದ ಬಳಿಕ ನಂದ್ಯದ ಗುರಿಕಾರರು ಹಾಗೂ ತೀಯಾ ಸಮಾಜದ ಪ್ರಮುಖರು ಭದ್ರಕಾಳಿ ಹಾಗೂ ಅರಸು ದೈವದ ಅಲಂಕಾರ ಗೊಂಡ ಪಂಬದ ಬಂದುಗಳನ್ನು ರಾಜoಗಣಕ್ಕೆ ಕರೆದುಕೊಂಡು ಬಂದು ಅಲ್ಲಿ “ಕದ್ರು ಮುಡಿ ಏರುನ” ಎನ್ನುವ ವಿಶಿಷ್ಟ ಕಾರ್ಯಕ್ರಮ ಜರಗುತ್ತ ದೆ ನಂದ್ಯಾ ಕ್ಷೇತ್ರ ದಿಂದ ಬಂದ ಕದ್ರು ಮುಡಿಯಲ್ಲಿ ಪ್ರತಿಷ್ಟಾಪಿಸಿದ ಶ್ರೀ ಭದ್ರಕಾಳಿ ದೇವಿಯ ಬಿಂಬವನ್ನು ಭದ್ರಕಾಳಿ ದೇವಿಯ ಅಲಂಕಾರದಲ್ಲಿ ರುವ ಪಂಬದ ಬಂಧುಗಳು ತಲೆಯಲ್ಲಿರಿಸಿ ನಂದ್ಯದ ಗುರಿಕಾರರು ಅದನ್ನು ಮೂರು ಸುತ್ತು ತಿರುಗಿಸುತ್ತಾರೆ.

ಅದನ್ನು ಕೆಳಗಿಳಿಸಿದ ಪಂಬದ ಬಂಧುಗಳು ಜಾಗಟೆ ಬಾರಿಸುತ್ತಾ ತೀಯಾ ಸಮಾಜದವರೆಂದಿಗೆ ಪ್ರಮಾಣ ಬಾವಿಗೆ ಒಂದು ಸುತ್ತು ಬಂದು ಕ್ಷೇತ್ರದ ಗೋಪುರದ ಬಳಿ ಬರುತ್ತಾರೆ ಆಗ ನಟ್ಟೋಜರು ಹಿಂಗಾರದ ಹಾಳೆಯನ್ನು ಹಿಡಿದುಕೊಂಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಹಿಂಬದಿಯಲ್ಲಿ ನಿಂತಿರುತ್ತಾರೆ.

ಅಲ್ಲಿಗೆ ಕ್ಷೇತ್ರದ ಸೇರಿಗಾರರು ಬರುತ್ತಾರೆ. ಆಗ ನಟ್ಟೋಜರು ಅವರ ಕೈಗೆ ಹಿಂಗಾರದ ಹಾಳೆಯನ್ನು ಕೊಟ್ಟು ಆರಡದ ದಿನವನ್ನು ಗೌಪ್ಯಾವಾಗಿ ಅವರ ಕಿವಿಯಲ್ಲಿ ತಿಳಿಸುತ್ತಾರೆ. ಅವರು ಅಂಗಣಕ್ಕೆ ಬಂದು ಭದ್ರಕಾಳೀ ಅಲಂಕಾರದಲ್ಲಿ ರುವ ಪಂಬದ ಬಂಧುಗಳ ಕಿವಿಯಲ್ಲಿ ಅರಾಡದ ದಿನವನ್ನು ಹೇಳುತ್ತಾರೆ.

ಆಗ ಭದ್ರಕಾಳೀ ಅಲಂಕಾರದಲ್ಲಿರುವ ಪಂಬದರು ಮೂರು ಬಾರಿ ಜಾಗಟೆ ಬಾರಿಸಿ ಜೋರಾಗಿ ಮೂರು ಬಾರಿ ಆರಡದ ದಿನವನ್ನು ಘೋಷಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದೇವಿಯ ಜಾತ್ರಾ ಮಹೋತ್ಸವದ ದಿನ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

ಆರಡದ ಮುನ್ನಾದಿನ ಮಹಾರಥೋತ್ಸವ ಅದರ ಹಿಂದಿನ ದಿನದವರೆಗೆ 5ದಿನಗಳ ಕಾಲ ‘ಪುರಾಲ್ದ ಚೆಂಡುʼ ಖ್ಯಾತಿಯ ಚೆಂಡಿನ ಉತ್ಸವ ನಡೆಯಲಿದೆ.

ಇದರ ಎಲ್ಲಾ ದಿನಗಳು ಆರಡದ ದಿನ ಮೂಲಕ ನಿರ್ಧಾರವಾಗುತ್ತದೆ. ಜಾತ್ರೆಯು ಮುಗಿಯುವ ಧ್ವಜಾವರೋಹಣದ ಪ್ರಕ್ರಿಯೆಯನ್ನೇ ಆರಡ ಎನ್ನುವುದು.

Leave a Comment

Your email address will not be published. Required fields are marked *