Ad Widget .

ಬಜಪೆ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ

ಸಮಗ್ರ ನ್ಯೂಸ್ : ಎಲ್ಲಿಂದಲೋ ಕದ್ದು ವಾಹನದಲ್ಲಿ ಮರಳು ಮತ್ತು ಕೆಂಪು ಕಲ್ಲು ಸಾಗಿಸುತ್ತಿದ್ದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ 2014ರ ಜು.12ರಲ್ಲಿ ದಾಖಲಾಗಿದ್ದ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸುಲ್ತಾಡಿ ಮನೆಯ ನಿತಿನ್ (37) ನನ್ನು ಬಂಧಿಸಲಾಗಿದೆ.

Ad Widget . Ad Widget .

ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆತನನ್ನು ಬಜಪೆ ಪೊಲೀಸ್ ನಿರೀಕ್ಷಕರ ನಂದೇಶ್ ಬಿ. ಕುಂಬಾರ್ ನೇತೃತ್ವದ ತಂಡ ಗುರುವಾರ ಕಡಬದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Ad Widget . Ad Widget .

2014ರ ಜು.12ರಂದು ಬೆಳಗ್ಗೆ 11ಕ್ಕೆ ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಕಂದಾವರದಲ್ಲಿ ಅನಧಿಕೃತವಾಗಿ ಬೇರೆ ಬೇರೆ ಲಾರಿಗಳಲ್ಲಿ ಮತ್ತು ಗಂಜಿಮಠದಲ್ಲಿ ಸುಮಾರು 11.45ಕ್ಕೆ ಲಾರಿಯಲ್ಲಿ ಯಾವುದೇ ಪರವಾನಿಗೆಯನ್ನು ಹೊಂದದೇ ಅಕ್ರಮವಾಗಿ ಕಳವು ಮಾಡಿ ತನ್ನ ವಾಹನದಲ್ಲಿ ಮರಳು ಮತ್ತು ಕೆಂಪು ಕಲ್ಲುಗಳನ್ನು ಸಾಗಿಸುತ್ತಿದ್ದ ಬಗ್ಗೆ ನಿತಿನ್ ವಿರುದ್ದ ಪ್ರಕರಣ ದಾಖಲಾಗಿತ್ತು.

ತಲೆಮರೆಸಿಕೊಂಡಿದ್ದ ಈ ಆರೋಪಿತರ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿಯವರಾದ ಸಿದ್ದಾರ್ಥ ಗೋಯೆಲ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕನಂದೇಶ್ ಬಿ ಕುಂಬಾರ್ ರವರ ನೇತೃತ್ವದಲ್ಲಿ ಎಸ್‌ಐಯವರಾದ ಗುರು ಕಾಂತಿ, ರೇವಣಸಿದ್ದಪ್ಪ, ಸಿಬ್ಬಂದಿಯವರಾದ ಎಎಸ್‌ಐ ರಾಮ ಪೂಜಾರಿ, ಜಗದೀಶ್ ಪುತ್ತೂರು, ರೋಹಿತ ಹಳೆಯಂಗಡಿ, ರಶೀದ್ ಶೇಖ್, ಸುಜನ್ ಮತ್ತು ಬಸವರಾಜ್ ಪಾಟೀಲ್ ರವರು ಭಾಗವಹಿಸಿದ್ದರು.

Leave a Comment

Your email address will not be published. Required fields are marked *