Ad Widget .

ಇಂದು ‘ಜಾಕಿ’ ರೀ ರಿಲೀಸ್| ಮುಗಿಲು ಮುಟ್ಟಿದ ಅಪ್ಪು ಅಭಿಮಾನಿಗಳ ಸಂಭ್ರಮ

ಸಮಗ್ರ ನ್ಯೂಸ್: ಪವರ್ ಸ್ಟಾರ್‌’ ಪುನೀತ್ ರಾಜ್‌ಕುಮಾರ್ ಅಂದ್ರೆ ನಮ್ಮೆಲ್ಲರ ಅಪ್ಪು ಬರ್ತ್ ಡೇಗೆ ಕೌಂಟ್ ಡೌನ್ ಶುರುವಾಗಿದೆ. ಇಂದು ಅಪ್ಪು
ಅಭಿನಯದ ‘ಜಾಕಿ’ ಸಿನಿಮಾವು ಮರು ಬಿಡುಗಡೆ ಆಗಿದೆ. ಬೆಳ್ಳಂಬೆಳಗ್ಗೆ ಬೆಳ್ಳಿ ಪರದೆಯಲ್ಲಿ ರಾಜರತ್ನನ ನೋಡಿ ಅಪ್ಪು ಅಭಿಮಾನಿಗಳು ಸಂತಸಗೊಂಡಿದ್ದಾರೆ.

Ad Widget . Ad Widget .

ಮಾ.17ರಂದು ಪುನೀತ್ ಹುಟ್ಟುಹಬ್ಬ. ಅದಕ್ಕೂ ಮುನ್ನ, ಅಂದರೆ ಇಂದು ‘ಜಾಕಿ’ ಸಿನಿಮಾ ರೀ-ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ‘ಜಾಕಿ’ ಜಾತ್ರೆ ಜೋರಾಗಿದು, ಹಬ್ಬದ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ, ಪ್ರಸನ್ನ, ಬಾಲಾಜಿ, ವೈಭವ್, ನವರಂಗ್, ಕಾಮಾಕ್ಯ, ಸಿದ್ದಲಿಂಗೇಶ್ವರ, ವೀರಭದ್ರೇಶ್ವರ, ರಾಬಿನ್‌ ಮುಂತಾದ ಕಡೆ ‘ಜಾಕಿ’ ಪ್ರದರ್ಶನ ಫಿಕ್ಸ್ ಆಗಿದೆ. ಆಗಲೇ ಬೆಂಗಳೂರು ಒಂದರಲ್ಲೇ ಮೊದಲ ದಿನ 80ಕ್ಕೂ ಅಧಿಕ ಶೋಗಳು ಜಾಕಿ ಸಿನಿಮಾಗೆ ಮೀಸಲಾಗಿವೆ. ‘ಜಾಕಿ’ ಕ್ರೇಜ್‌ ಜೋರಾಗಿದೆ”ನರ್ತಕಿ ಮತ್ತು ಪ್ರಸನ್ನ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಟಿಕೆಟ್‌ಗಳು ಅರ್ಧ ಗಂಟೆಯಲ್ಲಿ ಖಾಲಿ ಆಗಿವೆ. ಶೀಘ್ರದಲ್ಲೇ ಎಲ್ಲ ಸೆಂಟರ್‌ಗಳ ಬುಕ್ಕಿಂಗ್ ತೆರೆಯಲಾಗುವುದು. ಇತ್ತೀಚಿನ ದಿನಗಳಲ್ಲಿ ಈ ಇಷ್ಟೊಂದು ಅದ್ದೂರಿಯಾಗಿ ಸೆಲೆಬ್ರೇಷನ್ ಆಗುತ್ತಿರುವ ರೀ-ರಿಲೀಸ್‌ ಸಿನಿಮಾ ಇದು..” ಎಂದು ‘ಜಾಕಿ’ ವಿತರಣೆ ಮಾಡುತ್ತಿರುವ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದಾರೆ.

Ad Widget . Ad Widget .

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ ಆರನೇ ಸಿನಿಮಾ ‘ಜಾಕಿ’. ದುನಿಯಾ ಸೂರಿ ನಿರ್ದೇಶನ ಮಾಡಿದ್ದ ‘ಜಾಕಿ’ ಸಿನಿಮಾಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದರು. ಯೋಗರಾಜ್ ಭಟ್ ಎಲ್ಲ ಹಾಡುಗಳನ್ನು ಬರೆದಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಸಿನಿಮಾವು, ರಾಜ್ಯದ ಹಲವು ಥಿಯೇಟರ್‌ಗಳಲ್ಲಿ 100 ದಿನ ಪ್ರದರ್ಶನ ಕಂಡಿತ್ತು.ಅಲ್ಲಿವರೆಗೂ ಪುನೀತ್ ರಾಜ್‌ಕುಮಾರ್ ಫ್ಯಾಮಿಲಿ ಹೀರೋ, ಲವರ್ ಬಾಯ್, ಆಕ್ಷನ್ ಹೀರೋ ಥರದ ಪಾತ್ರಗಳನ್ನು ಮಾಡಿದ್ದರು. ಆದರೆ ‘ಜಾಕಿ’ ಸಿನಿಮಾದಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಸಖತ್ ಆಗಿಯೇ ಮಿಂಚಿದ್ದರು. ‘ಜಾಕಿ’ ಸಿನಿಮಾದಲ್ಲಿನ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ ಮತ್ತು ಫೈಟ್ಸ್ ಈಗಲೂ ಫ್ಯಾನ್ಸ್‌ಗೆ ಸಖತ್ ಇಷ್ಟ.

Leave a Comment

Your email address will not be published. Required fields are marked *