Ad Widget .

ಉಡುಪಿ: ಬ್ಯಾಂಕಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ|ಪ್ರಕರಣ ದಾಖಲು

ಸಮಗ್ರ ನ್ಯೂಸ್ : ಬ್ಯಾಂಕ್ ಶಾಖೆಯ ಮ್ಯಾನೇಜರ್, ಅಧ್ಯಕ್ಷರು ಸಹಿತ ಇತರರು ಸೇರಿ ಹಲವು ಮಂದಿಯ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಸಾಲ ಪಡೆದು ವಂಚಿಸಿರುವ ಘಟನೆ ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯಲ್ಲಿ ನಡೆದಿದೆ.

Ad Widget . Ad Widget .

ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಮಲ್ಪೆ ಶಾಖೆಯ ಸದಸ್ಯೆ, ಅಂಬಾಗಿಲಿನ ಶಾಹಿನ್ ಅವರನ್ನು ಆರೋಪಿ ರಿಯಾಝ್ ಎಂಬವರು ಮಹಾಲಕ್ಷ್ಮೀ ಸಹಕಾರಿ ಬ್ಯಾಂಕ್ ಬ್ಯಾಂಕ್ ಮ್ಯಾನೇಜರ್ ಸುಬ್ಬಣ್ಣ ಅವರಿಗೆ ಪರಿಚಯ ಮಾಡಿಸಿದ್ದು, 2021ರ ಜೂನ್‍ನಲ್ಲಿ ಬ್ಯಾಂಕಿನ ಮ್ಯಾನೇಜರ್ ಸುಬ್ಬಣ್ಣ ಅವರು ಶಾಹಿನ್ ಮತ್ತು ಇತರರಾದ ಅಫ್ರೀನ್, ತಸ್ಲಿಮ್, ರೆಹನಾ, ಮೈಮುನಾ, ಝೀನತ್, ನಬೀಸಾ, ರೇಷ್ಮಾ, ವಾರಿಜಾ, ಪ್ರೇಮಾ, ಮಣಿಪುರ ಮೈಮುನಾ. ಮುಫಿದಾ, ಮುಹಮ್ಮದ್ ಆಸಿಫ್, ಮುಲ್ತಾಝ್, ಸಂಶಾದ್, ನಸೀಮಾ, ಫೌಝಿಯಾ ಹಾಗೂ ಇತರರ ಮನೆಗಳಿಗೆ ಹೋಗಿ ತಾವು ತಮ್ಮ ಸಂಸ್ಥೆಯಿಂದ 20 ಸಾವಿರ ರೂ. ಹಣವನ್ನು ನೀಡುತ್ತೇವೆ. ನೀವು ತಿಂಗಳಿಗೆ 900ರೂ. ಬ್ಯಾಂಕಿಗೆ ಪಾವತಿಸಬೇಕು ಎಂದು ನಂಬಿಸಿದ್ದರು.

Ad Widget . Ad Widget .

ಅದರಂತೆ ಎಲ್ಲರ ಆಧಾರ್ , ಪಾನ್ ಕಾರ್ಡ್ ಪಡೆದು ತಮ್ಮ ಯಾವುದೇ ದಾಖಲೆಗೆ ಸಹಿ ಪಡೆಯದೆ ಕೊರೊನಾ ಸಮಯದಲ್ಲಿ 20 ಸಾವಿರ ರೂ. ಹಣವನ್ನು ಇವರೆಲ್ಲರಿಗೂನೀಢೀರ್ಧಧೂ, ಶಾಹಿನ್ ಮತ್ತು ಇತರರು ತಿಂಗಳಿಗೆ ಸರಿಯಾಗಿ ಹಣವನ್ನು ಪಾವತಿಸಿ ಆ ಬಗ್ಗೆ ತಾವು ಪಡೆದ ಸಾಲವನ್ನು ಸಂಪೂರ್ಣ ಮರುಪಾವತಿ ಮಾಡಿದ್ದರು ಎಂದು ತಿಳಿದು ಬಂದಿದೆ.

ಇದೀಗ ಶಾಹಿನ್ ಹಾಗೂ ಇತರರಿಗೆ ಬ್ಯಾಂಕಿನಿಂದ ನೋಟಿಸ್ ಬಂದಿದ್ದು ಆ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ 2ಲಕ್ಷ ರೂ. ಸಾಲವನ್ನು ಪಡೆದಿದ್ದು ಅದನ್ನು ಕೂಡಲೇ ಕಟ್ಟುವಂತೆ ತಿಳಿಸಿದರು.ಆದರೆ ಇವರು 2ಲಕ್ಷ ರೂ. ಸಾಲವನ್ನು ಪಡೆದಿರುವುದಿಲ್ಲ ಹಾಗೂ ಯಾವುದೇ ಸಾಲ ಪತ್ರಗಳಿಗೆ ಸಹಿ ಮಾಡಿರುವುದಿಲ್ಲ ಎಂದು ಹೇಳಿದ್ದಾರೆ. ಬ್ಯಾಂಕಿನ ಮ್ಯಾನೇಜರ್ ಹಾಗೂ ಅಧ್ಯಕ್ಷರು ಹಾಗೂ ಇತರರು ಸೇರಿ ಶಾಹಿನ್ ಹಾಗೂ ಇತರರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್‍ನ್ನು ಬಳಸಿಕೊಂಡು ನಕಲು ಸಹಿ ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಿನಲ್ಲಿ 2ಲಕ್ಷ ರೂ. ಸಾಲ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ. ಘಟನೆ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *