Ad Widget .

ಉಡುಪಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ಉದ್ಯೋಗ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ವಸೂಲು ಮಾಡಿದ ಬಗ್ಗೆ ದೂರು ದಾಖಲಾಗಿದೆ.

Ad Widget . Ad Widget .

ಪಡುಅಲೆವೂರಿನ ವೀರೇಶ್ ಅವರಿಗೆ ಆರೋಪಿ ಅಭಿಷೇಕ್ ಎನ್. ಎಂಬಾತ ಬೆಂಗಳೂರಿನಲ್ಲಿ ಪರಿಚಯವಾಗಿದ್ದ. ತಾನು ಸಾರಿಗೆ ಇಲಾಖೆಯಲ್ಲಿ ಬ್ರೇಕ್ ಇನ್‌ಸ್ಪೆಕ್ಟರ್ ಆಗಿರುವುದಾಗಿ ತಿಳಿಸಿದ್ದ. ವೀರೇಶ್ ಮತ್ತು ಆತನ ಸ್ನೇಹಿತ ರವೀಂದ್ರ ಅವರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ವೀರೇಶ್ ಅವರಿಂದ 18 ಲ.ರೂ. ಹಾಗೂ ರವೀಂದ್ರ ಅವರಿಂದ 10 ಲ.ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ 2021ರಿಂದ 2023ರ ನಡುವೆ ವರ್ಗಾಯಿಸಿಕೊಂಡಿದ್ದ. ಆದರೆ ಆರೋಪಿಯು ಇದುವರೆಗೆ ಉದ್ಯೋಗ ಅಥವಾ ಹಣವನ್ನು ಹಿಂದಿರುಗಿಸದೆ ವಂಚಿಸಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget . Ad Widget .

Leave a Comment

Your email address will not be published. Required fields are marked *