Ad Widget .

ಪಡುಬಿದ್ರಿ: 30 ವರ್ಷಗಳಿಂದ “ತಲೆಮರೆಸಿಕೊಂಡಿದ್ದ” ಆರೋಪಿ ಸಾವು

ಸಮಗ್ರ ನ್ಯೂಸ್ : ಸರಕಾರಿ ಜಾಗದಿಂದ ಮರ ಕಡಿದು ಲಾರಿಯಲ್ಲಿ ಸಾಗಿಸುತ್ತಿದ್ದಾಗ ನಂದಿಕೂರು ಪೇಟೆಯಲ್ಲಿ 1981ರಲ್ಲಿ ಲಾರಿ ಸಮೇತ ಸಿಕ್ಕಿಬಿದ್ದ ಆರೋಪಿಗಳಲ್ಲಿ ಓರ್ವನಾದ ಮಂಜರಪಲ್ಕೆಯ ಸುಧಾಕರ ಶೆಟ್ಟಿ 1994ರಲ್ಲಿ ಯಾವುದೋ ಕಾಯಿಲೆಯಿಂದ ಸಾವನ್ನಪ್ಪಿರುವುದನ್ನು ಪಡುಬಿದ್ರಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

Ad Widget . Ad Widget .

ಬಹಳಷ್ಟು ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ಇದ್ದ ಕಾರಣದಿಂದ ಸುಧಾಕರ ಶೆಟ್ಟಿ ವಿರುದ್ಧ ವಾರಂಟ್ ಜಾರಿಯಾಗಿತ್ತು. ಪಡುಬಿದ್ರಿ ಎಎಸ್‌ಐ ರಾಜೇಶ್ ಪಿ. ಅವರು ಆರೋಪಿ ಮೃತಪಟ್ಟಿರುವ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ದಾಖಲೆಗಳನ್ನು ಪಡೆದು, ಕಾರ್ಕಳ ಪುರಸಭೆಯಿಂದ ಮರಣ ದೃಢಪತ್ರವನ್ನೂ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *