ಸಮಗ್ರ ನ್ಯೂಸ್: ಬೆಳ್ಳಾರೆ ಪೆರುವಾಜೆಯ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಚಂದನ ಸಾಹಿತ್ಯ ವೇದಿಕೆ ಸುಳ್ಯ ಇವರ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಮತ್ತು ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವು ಜರುಗಿತು.

ಡಾ.ಕೆ.ಶಿವರಾಮ ಕಾರಂತ ಸರಕಾರಿ ಫುಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇದರ ಪ್ರಾಂಶುಪಾಲ ದಾಮೋದರ ಕಣಜಾಲು ಅವರು ಸಭಾಧ್ಯಕ್ಷತೆ ವಹಿಸಿದ್ದರು. ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಹೆಚ್. ಭೀಮರಾವ್ ವಾಷ್ಠರ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕವಿಗೋಷ್ಠಿ ಅಧ್ಯಕ್ಷತೆಯನ್ನು ಬರಹಗಾರ್ತಿ ಚಂದ್ರಾವತಿ ಬಡ್ಡಡ್ಕರವರು ವಹಿಸಿದ್ದರು. ಕವಯಿತ್ರಿ ತರಬೇತುದಾರೆ ಡಾ. ಅನುರಾಧ ಕುರುಂಜಿ ಅವರು ಮಹಿಳಾ ದಿನಾಚರಣೆಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಖ್ಯಾತ ಕವಯಿತ್ರಿ ಸಂಗೀತ ರವಿರಾಜ್ ಅವರು ಭಾಗವಹಿಸಿದ್ದರು. ಮಹಿಳಾ ವೇದಿಕೆ ಸಂಚಾಲಕಿ ಸುನೀತಾ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.
ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಕಾಂತರಾಜು. ಸಿ ಸಹಕರಿಸಿದರು. ಚಂದನ ಸಾಹಿತ್ಯ ವೇದಿಕೆ ವತಿಯಿಂದ ಕವಿ ಸಾಹಿತಿ ಚಿತ್ರ ನಿರ್ದೇಶಕ ಜ್ಯೋತಿಷಿ ಸಂಘಟಕ ಗಾಯಕರಾದ ಹೆಚ್ ಭೀಮರಾವ್ ವಾಷ್ಠರ್ ರವರು ಡಾ. ಅನುರಾಧ ಕುರುಂಜಿ, ಸಂಗೀತ ರವಿರಾಜ್, ಚಂದ್ರಾವತಿ ಬಡ್ಡಡ್ಕ, ಸುನಿತಾ ನಾಯ್ಕ ಮತ್ತು ದಾಮೋದರ ಕಣಜಾಲು ಅವರಿಗೆ ಚಂದನ ರತ್ನ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ನಂತರ ನಡೆದ ಮಹಿಳಾ ಕವಿಗೋಷ್ಠಿಯಲ್ಲಿ ಮಹಿಳಾ ಕವಯಿತ್ರಿ ಬೃಂದಾ ಪ್ರಫುಲ್ ಪೂಜಾರಿ, ಸೌಜನ್ಯ ಬಿ ಎಂ. ಕೆಯ್ಯೂರು, ಶೃತಿ ಸಿ, ಕೃತಿಕಾ ಎನ್, ಪ್ರಿಯಾಂಕಾ ಎಸ್, ದೀಕ್ಷಾ ಪಿ ಎಲ್, ರೇಷ್ಮಾ ಜಿ.ಜಿ., ನೀಷ್ಮಾ ಕೆ.ವಿ., ಮಾನಸ ಬಿ ಜಿ, ದೀಕ್ಷಿತಾ ಬಿ ಎಲ್, ತೇಜಸ್ವಿನಿ, ಸಂಗೀತಾ ರವಿರಾಜ್, ಅನುರಾಧಾ ಕುರುಂಜಿ ಭಾಗವಹಿಸಿದ್ದರು.

ಪ್ರಾರ್ಥನಾ ಗೀತೆಯನ್ನು ಶ್ರಾವ್ಯ ಜಿ.ಪಿ ಪ್ರಥಮ ಬಿಕಾಂ ಮತ್ತು ತಂಡ ಹಾಡಿದರು. ದೀಪ್ತಿ ಡಿ ತೃತೀಯ ಬಿಕಾಂ ಸ್ವಾಗತಿಸಿ ದೀಕ್ಷಿತಾ ಬಿ.ಎಲ್ ತೃತೀಯ ಬಿಎಸ್ಡಬ್ಲ್ಯೂ ನಿರೂಪಿಸಿ, ಮನೀಷಾ ಕೆ ತೃತೀಯ ಬಿ.ಎ ವಂದಿಸಿದರು.