Ad Widget .

ಮತ್ತೆ ಏರಿಕೆಯತ್ತ ಅಡಿಕೆ ಮಾರುಕಟ್ಟೆ| ನಿಲ್ಲದ ಕೋಕ್ಕೊ ನಾಗಾಲೋಟ

ಸಮಗ್ರ ನ್ಯೂಸ್: ತೀವ್ರ ಕುಸಿತ ಕಂಡಿದ್ದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆ ಕಾಣುತ್ತಿದೆ. ಕಳೆದೆರಡು ವಾರಗಳ ಹಿಂದೆ 310ಕ್ಕೆ ಕುಸಿದಿದ್ದ ಹೊಸ ಅಡಿಕೆ ದರ ಇದೀಗ ₹.350ರತ್ತ ಜಿಗಿದಿದೆ.

Ad Widget . Ad Widget .

ಹೊರ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರದ ಹಿಂದಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಕೆ.ಜಿ.ಗೆ 10 ರೂ., ಸಿಂಗಲ್‌ ಚೋಲ್‌ 15 ರೂ., ಡಬ್ಬಲ್‌ ಚೋಲ್‌ 20 ರೂ.ನಷ್ಟು ಹೆಚ್ಚಳ ಕಂಡಿದೆ. ದಿನದಿಂದ ದಿನಕ್ಕೆ ದರ ಏರಿಕೆಯತ್ತ ಮುಖ ಮಾಡಿದೆ. ಕ್ಯಾಂಪ್ಕೋ ಕೂಡ ಧಾರಣೆ ಏರಿಸುವಲ್ಲಿ ಉತ್ಸಾಹ ತೋರಿದೆ.

Ad Widget . Ad Widget .

ಹೊರ ಮಾರುಕಟ್ಟೆಗೆ ಹೋಲಿಸಿ ದರೆ ಕ್ಯಾಂಪ್ಕೋದಲ್ಲಿ ಐದು ರೂ. ಕಡಿಮೆ ಇದೆ. ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಫೆ. 26ರಂದು ಹೊಸ ಅಡಿಕೆಗೆ 325-345 ರೂ., ಸಿಂಗಲ್‌ ಚೋಲ್‌ಗೆ 400 ರೂ.ನಿಂದ 410 ರೂ., ಡಬ್ಬಲ್‌ ಚೋಲ್‌ 400 ರೂ.ನಿಂದ 425 ರೂ. ತನಕ ಇತ್ತು. ಮಾ. 12ರಂದು ಹೊಸ ಅಡಿಕೆಗೆ 340-350 ರೂ., ಸಿಂಗಲ್‌ ಚೋಲ್‌ಗೆ 418 ರೂ.ನಿಂದ 420 ರೂ., ಡಬ್ಬಲ್‌ ಚೋಲ್‌ 430 ರೂ.ನಿಂದ 440 ರೂ. ತನಕ ಇತ್ತು. ಅಡಿಕೆಗೆ ಪ್ರಸ್ತುತ ಬೇಡಿಕೆ ಹೆಚ್ಚುತ್ತಿರುವುದರಿಂದ ಧಾರಣೆ ಇನ್ನಷ್ಟುಏರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಕೊಕ್ಕೊ 160 ರೂ.
ಅಡಿಕೆ ಕೃಷಿಕರಿಗೆ ಉಪ ಬೆಳೆಯಾಗಿ ಆಸರೆ ಯಾಗಿರುವ ಕೊಕ್ಕೊ ಧಾರಣೆ ಏರಿಕೆಯ ನಾಗಾಲೋಟ ಮುಂದು ವರಿದಿದೆ. ಕ್ಯಾಂಪ್ಕೋ ಮಾರು ಕಟ್ಟೆಯಲ್ಲಿ ಮಾ. 12ರಂದು ಹಸಿ ಕೊಕ್ಕೊ ಕೆ.ಜಿ.ಗೆ 160 ರೂ. ದರದಲ್ಲಿ ಖರೀದಿಯಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಕೆ.ಜಿ.ಗೆ 150 ರೂ.ಗೆ ತಲುಪುವ ಮೂಲಕ ಕೊಕ್ಕೊ ಧಾರಣೆ ದಾಖಲೆ ಬರೆದಿತ್ತು.

Leave a Comment

Your email address will not be published. Required fields are marked *