ಮಣಿಪಾಲ: ಚಾಲಕನ ನಿರ್ಲಕ್ಷ್ಯದಿಂದ ಚಕ್ರಕ್ಕೆ ಸಿಲುಕಿ ಬಸ್ ಮಾಲಕ ಸಾವು

ಸಮಗ್ರ ನ್ಯೂಸ್: ಬಸ್‍ವೊಂದನ್ನು ಗ್ಯಾರೇಜ್‍ನಲ್ಲಿ ರಿಪೇರಿಗೆ ನೀಡಿದ್ದರು. ಈ ವೇಳೆ ಬಸ್‍ನ ಎದುರು ಮಾಲಕ ನಿಂತಿದ್ದನ್ನು ಚಾಲಕ ಗಮನಿಸದೆ ಬಸ್ ಚಲಾಯಿಸಿದ ಪರಿಣಾಮ ಮಾಲಕ ಮುಂಭಾಗದ ಚಕ್ರಕ್ಕೆ ಸಿಲುಕಿ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಘಟನೆ 80 ಬಡಗಬೆಟ್ಟುವಿನ ಗ್ಯಾರೇಜ್ ಒಂದರಲ್ಲಿ ಬುಧವಾರ ಅವಘಡದಲ್ಲಿ ಸಂಭವಿಸಿದೆ.

Ad Widget ... ..

ಖಾಸಗಿ ಬಸ್‍ನ ಮಾಲಕ ದಯಾನಂದ ಶೆಟ್ಟಿ (65) ಮೃತಪಟ್ಟವರು. ತತ್‍ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

Ad Widget

Leave a Comment

Your email address will not be published. Required fields are marked *