ಸಮಗ್ರ ಸಮಾಚಾರ: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಲೋಕಸಬಾ ಸ್ಪರ್ಧೆ ಅವಕಾಶ ಈ ಬಾರಿ ಬ್ರಿಜೇಶ್ ಚೌಟರಿಗೆ ಒಲಿದು ಬಂದಿದೆ. ಈ ಕ್ಷೇತ್ರದಲ್ಲಿ ಜೈನ್ ಸಮುದಾಯದಿಂದ ಧನಂಜಯ ಕುಮಾರ್ ಬಿಜೆಪಿಯಿಂದ ಒಕ್ಕಲಿಗ ಸದಾನಂದ ಗೌಡ ಒಂದು ಬಾರಿ, ಬಂಟ್ಸ್ ನಳಿನ್ 3 ಬಾರಿ ಅದ ಬಳಿಕ ಮತ್ತೇ ಬಿಜೆಪಿ ಬಂಟ ಸಮುದಾಯಕ್ಕೆ ಮಣೆ ಹಾಕಿದೆ. 1990 ಅಯೋಧ್ಯೆ ರಾಮ ಮಂದಿರ,ಹಿಂದುತ್ವ ಈ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆ ಪೂರಕವಾಗಿತ್ತು.
ನಾಲ್ಕನೇ ಬಾರಿ ಕಟೀಲ್ ಟಿಕೆಟ್ ಖಂಡಿತ ಅವರ ಆಪ್ತ ವಲಯದಲ್ಲಿ ಹರಿದಾಡಿತ್ತು. ಆದರೆ ಜಿಲ್ಲೆಯಲ್ಲಿ 5,6 ವರ್ಷಗಳಿಂದ ಸಂಘ ಮತ್ತು ಬಿಜೆಪಿ ಅಂತರ ಬಹಳ ಹೆಚ್ಚಾಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ನಂತರ ಘಟನಾವಳಿ ನಳಿನ್ ಗೆ ಅನಾನುಕೂಲಕರ ಅಂಶವಾಗಿ ಪರಿಣಮಿಸಿತು. ತನ್ನ ಆಪ್ತರನ್ನು ನಿಗಮ ಮಂಡಳಿ,ಆಯಾ ಕಟ್ಟಿನ ಜಾಗದಲ್ಲಿ ಕೂರಿಸಿಕೊಂಡರು. ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ರ ಬೆಂಬಲ ಕಟೀಲ್ ಗೆ ಶ್ರೀರಕ್ಷೆಯಾಗಿತ್ತು. ಅವರಿರುವ ತನಕ ಟಿಕೆಟ್ ಖಂಡಿತ ವಿಶ್ವಾಸ ನಳಿನ್ ಆಪ್ತರಲ್ಲಿ ಪ್ರಬಲವಾಗಿ ಮೂಡಿದ್ದು ಸುಳ್ಳಲ್ಲ.
ಆದರೆ ಕಳೆದ ವಿಧಾನ ಸಭಾ ಚುನಾವಣೆ ಪುತ್ತಿಲ ಬಂಡಾಯ ನಳಿನ್ ಗೆ ಮುಳ್ಳಾಯಿತು. ಸಂಘದ ಪ್ರಮುಖರ ನಡುವಿನ ಅಂತರ ಇನ್ನು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳೋದಿಲ್ಲ ಅನ್ನುವ ಅವರ ಮಾತು ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಕಲ್ಲಡ್ಕ ಪ್ರಭಾಕರ ಭಟ್ ಎರಡು ವರ್ಷ ಹಿಂದೆ ನಳಿನ್ ಟಿಕೆಟ್ ನೀಡಬರದೆಂದು ಸಂಘದ ಹಿರಿಯರ ಗಮನಕ್ಕೆ ತಂದಿದ್ದರು.
ಬಿ ಎಲ್. ಸಂತೋಷ್ ನಳಿನ್ ಪಕ್ಷ ಸಂಘಟನೆ ಮಾನದಂಡವಿಟ್ಟು ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೆ ಕರಾವಳಿ ಯ ಸಂಘದ ಪ್ರಮುಖರು ನಳಿನ್ ಬಿಟ್ಟು ಬೇರೆ ಯಾರಿಗೂ ನೀಡಿದರೂ ನಮ್ಮ ತಕರಾರಿಲ್ಲವೆಂದು ತಿಳಿಸಿದ್ದರು. ಒಬ್ಬ ಅಭ್ಯರ್ಥಿ ಗೆ ಬದಲಿ ಯಾರು ಮತ್ತೆ ಪ್ರಶ್ನೆ ಮೂಡಿದಾಗ ಬ್ರಿಜೇಶ್ 5 ವರ್ಷ ಹಿಂದೆ ಜಿಲ್ಲೆಯಲ್ಲಿ ನಳಿನ್ ಗೆ ಪರ್ಯಾಯ ನಾನು ಎಂಬ ಅಹಂನ ಬೆಳವಣಿಗೆ ಚೌಟರಿಗೆ ವರದಾನವಾಯ್ತು.
ರಾಜ್ಯದಲ್ಲಿ ಒಂದು ಸ್ಥಾನ ಬಂಟ್ಸ್ ಕೊಡಬೇಕು ದೃಷ್ಟಿಯಿಂದ ಉಡುಪಿ ಅಥವಾ ಮಂಗಳೂರು ಅವಕಾಶವಿರುವ ಕ್ಷೇತ್ರ,ಉಡುಪಿಯಲ್ಲಿ ಅಷ್ಟೇನು ಲಾಭಿಯಿಲ್ಲದ ಕಾರಣ ಚೌಟರಿಗೆ ವರವಾಗಿ ಪರಿಣಮಿಸಿತು. ಸಂಘ ಪರಿವಾರದ ಒಂದೇ ಅಜೇಂಡ ನಳಿನ್ ಟಿಕೆಟ್ ಕಟ್ ಮಾಡುವಲ್ಲಿ ಯಶಸ್ವಿಯಾಗಿದೇ ಕೊನೆಗಳಿಗೆಯಲ್ಲಿ . ಭರತ್ ಶೆಟ್ಟಿ ಹೆಸರು ತೇಲಿಬಿಟ್ಟು ಬ್ರಿಜೇಶ್ ಗೆ ಅಡ್ಡಗಾಲು ಹಾಕುವ ಪ್ರಯತ್ನ ನಳಿನ್ ಆಪ್ತರಿಂದ ನಡೆದಿದ್ದರೂ ಭರತ್ ಶೆಟ್ಟಿ ಕ್ಷೇತ್ರ ಮರು ಚುನಾವಣೆಗೆ ಬಿಜೆಪಿ ಹೈಕಮಾಂಡ್ ಒಪ್ಪದೇ ಇದ್ದಾಗ ಮತ್ತೆ ನಳಿನ್ ಪಾಲಿಗೆ ಕಾರ್ಮೋಡ ಕವಿದಿತ್ತು.
ಇತ್ತ ಒಕ್ಕಲಿಗರ ಕೂಗು ಸಮುದಾಯಕ್ಕೆ ನೀಡಬೇಕು ಎಂದ ಆಗ್ರಹ ಇದ್ದರೂ ಕೂಡಾ ಒಕ್ಕಲಿಗ ಗೌಡರ ಸಂಘಟನೆ ಒಂದೆರಡು ಪತ್ರಿಕಾಗೋಷ್ಠಿ ಮಾಡಿ ಲಘುವಾಗಿ ಪರಿಗಣಿಸದೆ ಇದ್ದುದರಿಂದ ಇದ್ದಮತ್ತೊಂದು ತೊಡಕು ಕ್ರಮೇಣ ಕ್ಷೀಣವಾಯ್ತು. 5 ವರ್ಷಗಳಿಂದ ನಳಿನ್ ಗೆ ಪರ್ಯಾಯವಾಗಿ ಕ್ಷೇತ್ರದಾದ್ಯಂತ ಸುತ್ತಾಟ, ಬಂಟರ ಜಾತೀ ಸಮೀಕರಣ,ಸಂಘ ಪರಿವಾರದ ಏಕತೆಯ ಸೂತ್ರ ಕ್ಯಾಪ್ಟನ್ ಬ್ರಿಜೇಶ್ ಚೌಟ ರಿಗೆ ಈ ಬಾರಿ ಲೋಕಸಭಾ ಸ್ಪರ್ಧೆಗೆ ಅವಕಾಶ ಒದಗಲು ಅನುಕೂಲಕರ ಅಂಶವಾಯ್ತು ಎಂದು ಸಂಘಟನೆಯ ಆಂತರಿಕ ಮೂಲಗಳು ಮಾಹಿತಿ ನೀಡಿವೆ.