Ad Widget .

ಕಾರ್ಕಳ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ – ಕೂದಲೆಳೆಯ ಅಂತರದಲ್ಲಿ ಸವಾರ ಪಾರು

ಸಮಗ್ರ ನ್ಯೂಸ್: ನಗರದ ಕರಿಯಕಲ್ಲು ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-169 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

Ad Widget . Ad Widget .

ಬಜಗೋಳಿ ಕಡೆಯಿಂದ ಕಾರೊಂದು ಅತೀ ವೇಗವಾಗಿ ಕಾರ್ಕಳ ಕಡೆಗೆ ಬರುತ್ತಿದ್ದು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ಘಟನೆಯ ತೀವ್ರತೆಗೆ ಸವಾರನು ಕಾರಿನ ಗಾಜಿನ ಮೇಲೆ ಹಾರಿಬಿದ್ದು ತಲೆಗೆ ಗಾಯವಾಗಿದೆ. ನಿಯಂತ್ರಣ ತಪ್ಪಿದ ಕಾರಿನ ಚಕ್ರ ರಸ್ತೆ ನಿರ್ಮಾಣಕ್ಕೆ ಹಾಕಲಾಗಿದ್ದ ಮಣ್ಣಿನ ಹೂತು ಹೋಗಿರುವುದಿಂದ ಅಲ್ಲಿಯೇ ನಿಂತು ಹೋಗಿದೆ. ಎದುರುಗಡೆಯಲ್ಲಿ ರಸ್ತೆಗೆ ಅಳವಡಿಸಲಾಗಿದ್ದ ನಾಮಫಲಕ ಇದ್ದು ಅದಕ್ಕೆ ಢಿಕ್ಕಿ ಹೊಡೆಯುತ್ತಿದ್ದರೆ ಇನ್ನಷ್ಟು ಅನಾಹುತ ಘಟನೆ ಹೆಚ್ಚುತ್ತಿತ್ತು.

Ad Widget . Ad Widget .

ಕಾರಿನ ಹಿಂಭಾಗದಲ್ಲಿ ಟೂರಿಸ್ಟ್ ವಾಹನದ ಜಾಹೀರಾತು ಕಂಡು ಬರುತ್ತಿದೆ. ದ್ವಿಚಕ್ರ ವಾಹನ ಕಾರಿನ ಮುಂಭಾಗದಲ್ಲಿ ಸಿಲುಕಿಕೊಂಡು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣಾ ಪೊಲೀಸರು ಅಗಮಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Comment

Your email address will not be published. Required fields are marked *