Ad Widget .

ಯದುವೀರ್‌ ಚುನಾವಣೆಗೆ ಸ್ಪರ್ಧಿಸದಂತೆ ಪೋಸ್ಟರ್‌ ಅಭಿಯಾನ

ಸಮಗ್ರ ನ್ಯೂಸ್: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಸಂಸದ ಪ್ರತಾಪ್‌ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.

Ad Widget . Ad Widget .

ರಾಜವಂಶಸ್ಥ ಯದುವೀರ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ರಾಜಕೀಯಕ್ಕೆ ಬರಬೇಡಿ. ರಾಜರಾಗಿರಿ ಕೇವಲ ಮಂತ್ರಿಯಾಗಬೇಡಿ ಎನ್ನುವ ಪೋಸ್ಟರ್ ಅಭಿಯಾನ ಆರಂಭವಾಗಿದೆ. ಯುವರಾಜರೇ ನಿಮಗೆ ನಿಮ್ಮದೇ ಘನತೆ ಇದೆ, ದಯವಿಟ್ಟು ರಾಜಕೀಯಕ್ಕೆ ಬರಬೇಡಿ. ರಾಜರಾಗಿರಿ ಕೇವಲ ಮಂತ್ರಿಯಾಗಬೇಡಿ” ಎಂದು ಮನವಿ ಮಾಡಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *