Ad Widget .

ಸಿಂಹ ಸೆರೆಗೆ ಬೋನು ಇಡ್ತಾರಾ ‘ಕೈ’ ಟ್ರಬಲ್ ಶೂಟರ್ |ಕುತೂಹಲ ಮೂಡಿಸಿದ ಮೈಸೂರು ಟಿಕೆಟ್ ಫೈಟ್

ಸಮಗ್ರ ನ್ಯೂಸ್: ರಾಜ್ಯದ ಟ್ರಬಲ್ ಶೂಟರ್ ಇದೀಗ ಮೈಸೂರಿನ ಚುನಾವಣೆ ಅಖಾಡಕ್ಕೆ ಇಳಿದಿದ್ದು, ಟಿಕೆಟ್ ವಂಚಿತ ಪ್ರಭಾವಿ ಒಕ್ಕಲಿಗ ಯುವ ನಾಯಕ ಪ್ರತಾಪ್ ಸಿಂಹರನ್ನು ಕಾಂಗ್ರೆಸ್ ಗೆ ಕರೆತರಲು ಪ್ಲ್ಯಾನ್ ರೆಡಿಯಾಗ್ತಿರುವ ಸುದ್ದಿ ಹರಿದಾಡ್ತಿದೆ. ಈ ನಡುವೆ ತವರು ನೆಲದಲ್ಲಿನ ಬೆಳವಣಿಗೆ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ. ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವಂತಹ ಮಾಸ್ಟರ್ ಸ್ಟ್ರೋಕ್ ಗೆ ಕೈ ಹಾಕಿರುವುದು ಕಾಂಗ್ರೆಸ್ ಆಪ್ತವಲಯದಿಂದ ಮಾಹಿತಿ ಹೊರಬಿದ್ದಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಸಿದ್ದರಾಮಯ್ಯರನ್ನು ಮಟ್ಟಹಾಕಲು ಅವರ ಹುಟ್ಟೂರಿನಲ್ಲೇ ಓರ್ವ ಪ್ರಬಲ ಒಕ್ಕಲಿಗ ನಾಯಕನ ಅವಶ್ಯಕತೆ ಇದ್ದಿದ್ದು ಹಾಲಿ ಸಂಸದರ ಮುಖಾಂತರ ಡಿಕೆಶಿಯ ಪ್ಲಾನ್ ಯಶಸ್ವಿಯಾಗುತ್ತೋ ಎಂಬ ಕುತೂಹಲ ಗರಿಗೆದರಿದೆ.

Ad Widget . Ad Widget . Ad Widget .

ರಾಜಕಾರಣದಲ್ಲಿ ಗೆಳೆತನ ಮತ್ತು ಹಗೆತನ ಇದೆರಡು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ರಾಜ್ಯದ ಸಂಸದರ ಪೈಕಿ ಯುವ ಸಂಸದರೆಂದರೆ ಅದು ಪ್ರತಾಪ್ ಸಿಂಹ ಮತ್ತು ತೇಜಸ್ವಿ ಸೂರ್ಯ. ಇಬ್ಬರು ಸಂತೋಷ್ ಪಾಳಯದಲ್ಲಿ ಪಳಗಿದ ಕಲಿಗಳು, ಜೊತೆಗೆ ಉತ್ತಮ ವಾಕ್ಪಟುಗಳು. ಆದರೆ ಅಭಿವೃದ್ಧಿ ವಿಚಾರ ಬಂದಾಗ ಸಿಂಹ ಮಾತ್ರ ಸೂರ್ಯನಿಂದ ಮಾರುದೂರ. ಇತ್ತ ಕಾರ್ಯಕರ್ತ ಮತ್ತು ಮತದಾರರ ಮನಗೆಲ್ಲುವಲ್ಲಿ ಪ್ರತಾಪ್ ಸಿಂಹ ಯಶಸ್ವಿಯಾದರೆ ಅತ್ತ ತೇಜಸ್ವಿಸೂರ್ಯ ಆರಕ್ಕೇರದೆ ಮೂರಕ್ಕಿಳಿಯದ ಸಂಸದ ಎಂಬುದು ಪ್ರಚಲಿತ ಮಾತು. ತನ್ನ ಶಿಷ್ಯೋತ್ತಮನಿಗೆ ನಾಯಕತ್ವ ಬೆಳೆಸಲೆಂದು ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ಪಟ್ಟ ತೆಗೆಸಿಕೊಟ್ಟರೂ ಪ್ರತಾಪ್ ಸಿಂಹರ ಕಾರ್ಯವೈಖರಿ ಮುಂದೆ ತೇಜಸ್ವಿ ಸೂರ್ಯರ ಪ್ರಕಾಶ ಮಂದವಾಗಿಯೇ ಇತ್ತು.

ಇಷ್ಟೆಲ್ಲಾ ಮಾಡಿದರೂ ತನ್ನ ಕಾರ್ಯತಂತ್ರಗಳು ಫಲಪ್ರದವಾಗದಿದ್ದಾಗ ರಾಜ್ಯದಾದ್ಯಂತ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದ ಪ್ರತಾಪ್ ಮೂಲಕ ಬಿಜೆಪಿಯ ರಾಜ್ಯ ಘಟಕ ಮತ್ತು ಸ್ಥಳಿಯ ಬಿಜೆಪಿ ನಾಯಕರ ವಿರುದ್ಧ ನೇರವಾಗಿ ಮಾಧ್ಯಮದಲ್ಲಿ ಹೇಳಿಕೆ ಕೊಡಿಸುವ ಮತ್ತೊಬ್ಬ ಬಹಿರಂಗ ಬಂಡಾಯಗಾರನನ್ನು ಹುಟ್ಟುಹಾಕಿದ ಶ್ರೇಯಸ್ಸು ಸಂತೋಷರಿಗೆ ಸಲ್ಲುತ್ತೆ. ಇದೀಗ ಯದುವೀರ್ ಗೆ ಮಣೆ ಹಾಕುವತ್ತ ಕೇಂದ್ರ ಬಿಜೆಪಿ ಮನಸ್ಸು ಮಾಡಿಸುವುದರಲ್ಲಿಯೂ ಸಂತೋಷ್ ರ ಭವಿಷ್ಯದ ತಂತ್ರಗಾರಿಕೆಯೂ ಇದೆ ಎಂದು ಸಂಸದರ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ. ಇದೆಲ್ಲದರ ಪರಿಣಾಮ ಇಂದು ಪ್ರತಾಪ್ ಸಿಂಹನ ಬಿಜೆಪಿಯ ರಾಜಕೀಯ ಜೀವನ ತೂಗುಯ್ಯಾಲೆಯಂತಾಗಿದೆ.
ಅಲ್ಲಿಗೆ ರಾಜ್ಯದ 3 ಪ್ರಭಾವಿ ಒಕ್ಕಲಿಗ ನಾಯಕರು ಸಂತೋಷ್ ಮತ್ತು ಯಡಿಯೂರಪ್ಪ ಬಣಗಳ ನಡುವಿನ ರಾಜಕೀಯ ಹಗ್ಗಜಾಗ್ಗಾಟಕ್ಕೆ ಬಲಿಯಾದಂತಾಗಿದೆ. ಈ ಹಗ್ಗಜಗ್ಗಾಟದಲ್ಲಿ ಸಂತೋಷ್ ತಮ್ಮ ಬಣದ ಸ್ವಜಾತಿ ನಾಯಕರನ್ನು ರಕ್ಷಣಾತ್ಮಕ ರಾಜಕಾರಣದಲ್ಲಿ ತೊಡಗಿಸಿಕೊಂಡದ್ದು ಹಲವು ಗುಮಾನಿಗೆ ಎಡೆ ಮಾಡಿಕೊಟ್ಟಿದೆ‌.

ಈ ನಡುವೆ ಕರ್ನಾಟಕ ರಾಜಕೀಯ ವಲಯದಲ್ಲಿ ಲಿಂಗಾಯತ ಮತ್ತು ಬ್ರಾಹ್ಮಣ ಸಮುದಾಯದ ನಾಯಕರ ಜಂಗೀ ಕುಸ್ತಿಯಲ್ಲಿ ಕಳೆದ 8 ತಿಂಗಳ ಅವಧಿಯಲ್ಲಿ 3 ಪ್ರಭಾವಿ ಒಕ್ಕಲಿಗ ಸಮಾಜದ ನಾಯಕರು ಬಲಿಯಾದಂತಾಗಿದೆ.

ಇದೇ ಲಾಭವನ್ನು ಬಳಸಿಕೊಳ್ಳಲು ಡಿಕೆಶಿ ತಂತ್ರಗಾರಿಕೆ ಹೆಣೆಯುತ್ತಿದ್ದು, ಇದಕ್ಕಾಗಿ ಹಲವು ಮಾರ್ಗಗಳನ್ನು ಹುಡುಕಾಡಲಾಗುತ್ತಿದೆ. ಒಂದೆಡೆ ಸಿದ್ದರಾಮಯ್ಯರಿಗೆ ಬ್ರೇಕ್ ಹಾಕುವುದರ ಜೊತೆಗೆ ತನ್ನ ಸಮುದಾಯವನ್ನು ಬೆಳೆಸಿಕೊಳ್ಳುವ ಬಂಡೆ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಬಿಜೆಪಿ ಮತ್ತು ರಾಷ್ಟ್ರೀಯತೆಯ ಚಿಂತನೆ, ವಿಚಾರಧಾರೆ ಹೊಂದಿರುವ ಸಿಂಹ ಡಿಕೆಶಿ‌ ಫಿಕ್ಸ್ ಮಾಡಿದ ಬೋನಿನೊಳಗೆ ಸೆರೆಯಾದರೆ‌ ಒಂದೇ ಕಲ್ಲಿಗೆ ಎರಡು ಹಣ್ಣು ‘ಕೈ’ ಸೇರೋದು ಪಕ್ಕಾ ಎಂಬುದು ರಾಜಕೀಯ ತಜ್ಞರ ಮಾತು.

Leave a Comment

Your email address will not be published. Required fields are marked *