ಸಮಗ್ರ ನ್ಯೂಸ್ : ವ್ಯಕ್ತಿಯೋರ್ವರ ಕೃಷಿಯೇತರ ಜಾಗದಲ್ಲಿ ಸುತ್ತಲೂ ಅಳವಡಿಸಿದ್ದ ಬೇಲಿ ಹಾಳಾಗಿದ್ದ ಬೇಲಿಯ ಕಂಬಗಳನ್ನು ರಿಪೇರಿ ಮಾಡುತ್ತಿದ್ದ ವೇಳೆ ತಂಡವೊಂದು ಅಕ್ರಮ ಪ್ರವೇಶಿಸಿ ಜಮೀನಿನ ಮಾಲಿಕನಿಗೆ ಜೀವ ಬೇದರಿಕೆ ಒಡ್ಡಿ, ಹಲ್ಲೆ ನಡೆಸಿ ಕೃಷಿ ಕೃತಗಳಿಗೆ ಹಾನಿ ಮಾಡಿದ ಘಟನೆ ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದಲ್ಲಿ ನಡೆದಿದೆ.
ಆರೋಪಿಗಳನ್ನು ಜೆರಾಲ್ಡ್ ಗ್ರೇಶನ ಡಿ ಸೋಜ, ಆಂದ್ರು ಡಿ ಸೋಜ, ಚಾಲ್ಸ್ ಡಿ ಸೋಜ, ಅಸ್ಟಿನ್ ಡಿ ಸೋಜ ಎಂದು ಗುರುತಿಸಲಾಗಿದೆ.
ಕಳ್ಳಿಗೆ ಗ್ರಾಮ, ಬಂಟ್ವಾಳ ನಿವಾಸಿ ಮಾರ್ಷೆಲ್ ಡಿ’ ಸೋಜ ಬಿನ್ ಲಾದ್ರು ಡಿ’ ಸೋಜ ಅವರು ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದಲ್ಲಿ ಕೃಷಿಯೇತರ ಜಾಗದಲ್ಲಿ ಮನೆ ನಿರ್ಮಿಸಿ ವಾಸಿಸಿಕೊಂಡು ಬರುತ್ತಿದ್ದು, ತಮ್ಮ ಜಾಗದ ಸುತ್ತಲೂ ಅಳವಡಿಸಿದ್ದ ಬೇಲಿಯ ಒಂದು ಭಾಗದಲ್ಲಿ ಹಾಳಾಗಿದ್ದ ಕಾರಣ ಬೇಲಿಯ ಕಂಬಗಳನ್ನು ರಿಪೇರಿ ಮಾಡುತ್ತಿದ್ದರು.
ಈ ವೇಳೆ ಏಕಾಏಕಿ ಜಮೀನಿಗೆ ಅಕ್ರಮ ಪ್ರವೇಶಿಸಿ ಆರೋಪಿಗಳ ತಂಡ ಮಾರ್ಷೆಲ್ ಡಿ’ ಸೋಜ ಅವರಿಗೆ ಬೇದರಿಕೆ ಒಡ್ಡಿ, ಹಲ್ಲೆ ನಡೆಸಿರುತ್ತಾರೆ. ಅಲ್ಲದೆ ಬೇಲಿ ಮತ್ತು ಕೃಷಿ ಕೃತಗಳಿಗೆ ಹಾನಿಮಾಡಿ ಸುಮಾರು 5,000/- ರೂ ನಷ್ಟವನ್ನುಂಟು ಮಾಡಿರುತ್ತಾರೆ.ಈ ಬಗ್ಗೆನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 54/2024 ಕಲಂ 447,504,324, 506,247 ,ಐಪಿಸಿ ಪ್ರಕರಣ ದಾಖಲಸಿ ತನಿಖೆ ನಡೆಸಲಾಗುತ್ತಿದೆ.